ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಮತ್ತು ಮೈಸೂರಿನ ಜನರ ಸುಗಮ ಸಂಚಾರಕ್ಕಾಗಿ ಮಂಗಳವಾರ ಕೆ ಆರ್ ಕ್ಷೇತ್ರದ ಶಾಸಕ ಟಿ. ಎಸ್. ಶ್ರೀವತ್ಸ ಅವರು ಆಯಕಟ್ಟಿನ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು.
ಸಂಚಾರ ವಿಭಾಗದ ಎಸಿಪಿ ಪರಶುರಾಮಪ್ಪ, ವೃತ್ತನರೀಕ್ಷ ಯೋಗೀಶ್ ಅವರೊಂದಿಗೆ ಹೆಚ್ಚು ಅಪಘಾತವಾಗುವ ಆಯಕಟ್ಟಿನ ಸ್ಥಳಗಳನ್ನು ಪರಿಶೀಲಿಸಿದರು.
ಈ ವೇಳೆ ಮಾತಾಡಿದ ಶ್ರೀವತ್ಸ ಅವರು ಮೈಸೂರು ದಸರಾ ಸಂದರ್ಭದಲ್ಲಿ ಪ್ರವಾಸಿಗರಿಗೆ ಮತ್ತು ಮೈಸೂರಿನ ಜನರಿಗೆ ತೊಂದರೆ ಆಗದ ರೀತಿ ನೋಡಿಕೊಳ್ಳಬೇಕಿದೆ, ಇಂದು ಒಂದೆರಡು ಆಯಕಟ್ಟಿನ ಸ್ಥಳಗಳನ್ನು ಎಸಿಪಿ ಅವರಿಗೆ ತೋರಿಸಿದ್ದೇನೆ ಎಂದು ಹೇಳಿದರು.
ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ ಎಲ್ಲಿ ಹೆಚ್ಚು ಆಕ್ಸಿಡೆಂಟ್ ಆಗುತ್ತದೆ ಯಾವ ಕಡೆ ಹಂಪ್ಸ್ ಗಳನ್ನು ಹಾಕಬೇಕು ಎಂಬ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ಮಾಡಲಾಗಿದೆ ಎಂದು ಹೇಳಿದರು.
ಇಂದು ಮಾನಂದವಾಡಿ ಜಂಕ್ಷನ್, ಸೆಂಚುರಿ ಪಾರ್ಕ್, ನವರ್ ಬಾದ್ ಠಾಣೆ ಬಳಿ, ಹಳೆ ರಿಜೆನ್ಸಿ ಥಿಯೇಟರ್ ಬಳಿ ಜಿಂಜರ್ ಹೋಟೆಲ್ ತಿರುವು ಕಡೆ ಸ್ಥಳ ಪರಿಶೀಲನೆ ಮಾಡಲಾಗಿದೆ.
ಜನ ಇನ್ನು ಸಮಸ್ಯೆ ಹೇಳಿದ್ದಾರೆ ಮೈಸೂರು ಸೌತ್ ಬಳಿ ಸಮಸ್ಯೆ ಇದೆ, ಜಾಕಿ ಫ್ಯಾಕ್ಟರಿ ನಾಡನಹಳ್ಳಿ ಪಾಳ್ಯ, ಎಚ್ ಡಿ ಕೋಟೆ ಕಡೆ ಹೋಗುವ ರಸ್ತೆಗಳಲ್ಲೂ ಹಂಪ್ಸ್ ಹಾಕಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಶ್ರೀವತ್ಸ ತಿಳಿಸಿದರು.
ಸಂಚಾರ ವಿಭಾಗದ ಎಸಿಪಿ ಪರಶುರಾಮಪ್ಪ, ವೃತ್ತನರೀಕ್ಷರಾದ ಯೋಗೀಶ್,
ನಗರಪಾಲಿಕೆ ಸದಸ್ಯರಾದ ಛಾಯಾದೇವಿ ,ಸಿಂಡಿಕೇಟ್ ಸದಸ್ಯರಾದ ಗೋಕುಲ್ ಗೋವರ್ಧನ್, ಬಿಜೆಪಿ ಮುಖಂಡರಾದ ಪ್ರದೀಪ್ ಕುಮಾರ್, ಜೈರಾಮ್ , ಮೈಸೂರು ನಗರ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ಜಗದೀಶ್, ಕೆ ಎಂ ನಿಶಾಂತ್, ಮನೋಜ, ಪ್ರಸನ್ನ, ಕಿಶೋರ ಕಂಡೇಶ್, ಚೇತನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.