ಮೈಸೂರು : ಹುಲಿ ದಾಳಿಗೆ ರೈತ ಬಲಿಯಾಗಿರುವ ಘಟನೆ
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೂಡು ಹೋಬಳಿ ಉಡುವೆಪುರ ಬಳಿಯ ನಾಗರಹೊಳೆ ಉದ್ಯಾನದ ಮುದ್ದನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಉಡುವೆಪುರದ ಗಣೇಶ್ (58) ಮೃತ ರೈತ.
ಮೃತರಿಗೆ ಪತ್ನಿ, ಮೂವರು ಗಂಡು
ಮಕ್ಕಳಿದ್ದಾರೆ.ಇಂದು ಸಂಜೆ ಜಾನುವಾರಗಳನ್ನ ಮೇಯಿಸುಲು ಹೋಗಿದ್ದರು.ಸಂಜೆ ಜಾನುವಾರುಗಳು ಮಾತ್ರಮನೆಗೆ ವಾಪಸ್ ಆಗಿವೆ.ಆದರೆ ಗಣೇಶ್ ಬಂದಿರಲಿಲ್ಲ. ಗಾಬರಿಗೊಂಡ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಹುಡುಕಾಡದ ವೇಳೆ ಮುದ್ದನಹಳ್ಳಿ ಅರಣ್ಯದ ಬಫರ್ ಏರಿಯಾದ ಪ್ರದೇಶದ ಕೆರೆ ಬಳಿ ಗಣೇಶ್ ಶವ ಪತ್ತೆಯಾಗಿದೆ.ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮನ.ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿಯಾಗಿದೆ.
ಸ್ಥಳಕ್ಕೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ ಅಲ್ಲದೆ
ಘಟನಾ ಸ್ಥಳಕ್ಕೆ ಶಾಸಕ ಜಿ.ಡಿ ಹರೀಶ್ ಗೌಡ ಭೇಟಿ ನೀಡಿ ಕುಟಬಸ್ಥರಿಗೆ ಸಾಂತ್ವಾನ ಹೇಳಿ 50 ಸಾವಿರ ಪರಿಹಾರ ನೀಡಿದ್ದಾರೆ