ಕಾಲ್ನಡಿಗೆ ಮೂಲಕ 69 ವನ್ಯಜೀವಿ ಸಪ್ತಾಹ ಆಚರಣೆ : ಜಿಲ್ಲಾಧಿಕಾರಿ ಚಾಲನೆ.
ವನ್ಯಜೀವಿ ಸಪ್ತಾಹದ ಅಂಗವಾಗಿ ಇಂದು ಜಿಲ್ಲಾಡಳಿತ ಮತ್ತು ಚಾಮರಾಜೇಂದ್ರ ಮೃಗಾಲಯ ಅರಣ್ಯ ಇಲಾಖೆ ವತಿಯಿಂದ ನಗರದ ಕೋಟೆ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿ
ವನ್ಯಜೀವಿಗಳ ಮಹತ್ವವನ್ನು ಸಾರುವ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಚಾಲನೆ ನೀಡಿದರು ನಂತರ ಮೈಸೂರು ಮೃಗಾಲಯದವರೆಗೆ ಸುಮಾರು 200 ಮಂದಿ ವಿದ್ಯಾರ್ಥಿಗಳು, ಸ್ಥಳೀಯ ಅರಣ್ಯ ಇಲಾಖೆ ಮತ್ತು ಮೃಗಾಲಯ ಅಧಿಕಾರಿ ಸಿಬ್ಬಂದಿಗಳು, ಮೃಗಾಲಯ ಸ್ವಯಂ ಸೇವಕರುಗಳು ಮತ್ತು ಇತರ ಸರ್ಕಾರೇತರ ಅಧಿಕಾರಿಗಳನ್ನೊಳಗೊಂಡ ಕಾಲ್ನಡಿಗೆ ಮೂಲಕ ತೆರಳಿದರು
ಈ ಸಂದರ್ಭದಲ್ಲಿ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಹಾಗೂ ಚಿತ್ರಕಲೆ ಪ್ರದರ್ಶನ ಕಾರ್ಯಕ್ರಮವನ್ನು ಮೃಗಾಲಯದ ಆಂಫಿ ಥಿಯೇಟರ್‌ನಲ್ಲಿ ಆಯೋಜಿಸಲಾಗಿದೆ.
ದಿನೇ ದಿನೇ ಅರಣ್ಯ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳು ನಾಡಿಗೆ ಬಂದು ಹಾವಳಿ ಮಾಡುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಸಂಪತ್ತನ್ನು ಹೆಚ್ಚಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಿದೆ. ಮೈಸೂರು ಭಾಗದಲ್ಲಿ ಹೆಚ್ಚು ಅರಣ್ಯ ಸಂಪತ್ತು ಇದೆ ಹೀಗಾಗಿ ವನ್ಯಜೀವಿ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು
ಅಕ್ಟೋಬರ್ 2 ರಿಂದ 8 ವರಗೆ ವನ್ಯಜೀವಿ ಸಪ್ತಾಹ ಹಮ್ಮಿಕೊಂಡಿದ್ದು ಇಂದು ಅರಮನೆಯಿಂದ ಮೃಗಾಲಯದವರಗೆ ಕಾಲ್ನಡಿ ಕಾರ್ಯಕ್ರಮ ನಡೆಸಲಾಗಿದೆ ಹಾಗೂ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಹಾಗೂ ಚಿತ್ರಕಲೆ ಪ್ರದರ್ಶನ ಕಾರ್ಯಕ್ರಮವನ್ನು ಮೃಗಾಲಯದ ಆಂಫಿ ಥಿಯೇಟರ್‌ನಲ್ಲಿ ಆಯೋಜಿಸಲಾಗಿದೆ ಈ ಒಂದು ವಾರದಲ್ಲಿ ವವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಗುಜರಾತ್ ಯಿಂದ ಸೈಕಲ್ ಸವಾರಿ ಸವರಿ ಮಾಡುತ್ತಿದ್ದೇನೆ ಪೂರ್ತಿ ಭಾರತವನ್ನು ಸೈಕಲ್ ಸವಾರಿ ಮಾಡಿದ್ದೇನೆ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶಗೊಳ್ಳುತ್ತದೆ ಕಾಡಿನಲ್ಲಿ ಸಂಚರಿಸುವಾಗ ಪ್ರಾಣಿಗಳು ರಸ್ತೆ ಮಧ್ಯದಲ್ಲಿ ಇದ್ದರೆ ಅವುಗಳಿಗೆ ತೊಂದರೆ ಕೊಡಬಾರದು ಪ್ರಾಣಿಗಳು ನಮ್ಮ ದೇಶದ ಆಸ್ತಿ ಎಂದರು.
ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸೌರಭ ಕುಮಾರ್, ಬಸವರಾಜು ಉಪಸ್ಥಿತರಿದ್ದರು