ಮೈಸೂರು : ಡೆಲ್ಲಿಯಲ್ಲಿ ಧರಣಿ ಮಾಡ್ತೀವಿ
ಮೈಸೂರಿನಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ನಾವು ದೆಲ್ಲಿಯಲ್ಲಿ ಹೋರಾಟ ಮಾಡ್ತೀವಿ
ಜಂತರ್ ಮಂತರ್ ನಲ್ಲಿ ನಮ್ಮ ಹೋರಾಟ ಮಾಡ್ತೀವಿ
ಕಾವೇರಿ ವಿಚಾರದಲ್ಲಿ ನಮಗೆ ಅನ್ಯಾಯವಾಗಿದೆ
ಸಿಎಂ ಸಿದ್ದರಾಮಯ್ಯ ಈ ಕುರಿತು ಕ್ರಮ ತೆಗೆದುಕೊಳ್ಳಬೇಕು. ಉದ್ದೇಶ ಪೂರ್ವಕವಾಗಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ರೆ ಅದು ತಪ್ಪು. ಪಾಲಿಸಲಾಗದ ಆದೇಶ ಉಲ್ಲಂಘನೆ ಮಾಡಿದ್ರೆ ಅದು ತಪ್ಪಲ್ಲ.ಆದೇಶ ಉಲ್ಲಂಘನೆ ಮಾಡಿದ್ರೆ ಜಲಾಶಯದ ಕೀ ಕಿತ್ತುಕೊಳ್ಳುವ ಭಯ ನಿಮಗಿದೆ ಅನಿಸುತ್ತೆ.ನಿಮ್ಮಿಂದ ಕಿತ್ತು ಕೊಳ್ಳಬಹುದು ರೈತರಿಂದಲ್ಲ
ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಈ ಬಗ್ಗೆ ಯೋಚನೆ ಮಾಡ್ಬೇಕು ಎಂದರು.
ಕೇಂದ್ರ ಸರ್ಕಾರ ಈ ಕೂಡಲೇ ಕಾವೇರಿ ವಿಚಾರಕ್ಕೆ ಮದ್ಯ ಪ್ರವೇಶಿಸಬೇಕು. ಕಾವೇರಿ ಕೊಳ್ಳದ 9 ಎಂಪಿಗಳು ಮೋದಿ ಭೇಟಿ ಮಾಡಿ ವಿನಂತಿ ಮಾಡ್ಬೇಕು
9 ಜನ ಎಂಪಿಗಳೂ ಬೀದಿಗಿಳಿದು ಜನರ ಪರ ನಿಲ್ಲಬೇಕು
ಈ ಭಾಗದ 50ಕ್ಕು ಹೆಚ್ಚು ಎಂ.ಎಲ್. ಎ ಗಳು ಕೂಡ ಬೀದಿಗೆ ಇಳಿಯಬೇಕು. ಇಲ್ಲದಿದ್ದರೆ ನಿಮ್ಮನ್ನು ಮನೆಯಿಂದ ನಾವೇ ಎಳೆ ತರುವ ಕೆಲ್ಸ ಮಾಡುತ್ತೇವೆ
ನಮ್ಮದು ಒಕ್ಕೂಟ ವ್ಯವಸ್ಥೆ. ಎರಡು ರಾಜ್ಯಗಳ ನಡುವೆ ಕಂದಕ ಉಂಟಾದಾಗ ಕೇಂದ್ರ ಮದ್ಯೆ ಬರಬೇಕು
ಇಲ್ಲದಿದ್ದರೆ ಒಕ್ಕೂಟದ ವಿರುದ್ಧ ಅಪಸ್ವರ ಬರತ್ತೆ
ಎಲ್ಲವನ್ನೂ ಮನಗೊಂಡು ತೀರ್ಮಾನ ಮಾಡ್ಬೇಕು ಎಂದರು
ನಮ್ಮ ಎಂಪಿಗಳು ನರ ಸತ್ತ ಎಂಪಿಗಳು ನಿಮ್ಮನ್ನು ಆಯ್ಕೆ ಮಾಡಿದ್ದು ನಮ್ಮ ಪರ ಕೆಲಸ ಮಾಡ್ಲಿ ಅಂತ
ಮನೇಲಿ ಕೂತು ಬಿಟ್ಟಿ ಭೋದನೆ ಮಾಡ್ಲಿ ಅಂತಲ್ಲ
ನೀವು ಬಂದು ನಮ್ಮ ಪರ ನಿಲ್ಲಬೇಕು.
ಬೀದಿಗಿಳಿದು ರಾಜ್ಯದ ಜನರ ಪರ ಹೋರಾಟ ಮಾಡ್ಬೇಕು
ರಾಜ್ಯದ ಬಿಜೆಪಿ ಎಂಪಿಗಳು ಮೋದಿ ಮುಂದೆ ತುಟಿ ಬಿಚ್ಚಲ್ಲ. ಇವರನ್ನು ಆಯ್ಕೆ ಮಾಡಿದ್ದು ನಮ್ಮ ತಪ್ಪು ಎಂದು ಸಂಸದರ ವಿರುದ್ಧ ಕಿಡಿಕಾರಿದರು.