ಚಾಮರಾಜನಗರ: ದೇವಾಲಯದಲ್ಲಿ ಮುಂಜಾನೆ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಘಟನೆ ಚಾಮರಾಜನಗರ ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಹೆಗ್ಗೋಠಾರ ಗ್ರಾಮದ ಶ್ರೀ ಸಿದ್ದರಾಮೇಶ್ವರ ದೇವಾಲಯದಲ್ಲಿ ಶನಿವಾರ ಬೆಳಗಿನ ಜಾವ 2 ಗಂಟೆಯ ಸಮಯಯಲ್ಲಿ ಖತರ್ನಾಖ್ ಕಳ್ಳರಿಬ್ಬರು ದೇವಾಲಯದ ಬಾಗಿಲು ಮುರಿದು ಕಳ್ಳತನಕ್ಕೆ ವಿಫಲ ಪ್ರಯತ್ನ ಮಾಡಿದ್ದಾರೆ.
ದೇವಾಲಯದ ಬಾಗಿಲು ಸೆನ್ಸಾರ್ ತಂತ್ರಜ್ಞಾನದಿಂದ ಬೆಚ್ಚಿಬಿದ್ದ ಕಳ್ಳರು,
ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಕಬ್ಬಿಣದ ರಾಡ್ ಬಳಸಿ ಬಾಗಿಲು ಮುರಿಯಲು ಮುಂದಾದ ಕಳ್ಳರು, ಬಾಗಿಲ ಸೆನ್ಸಾರ್ ಶಬ್ದದಿಂದ ಹೆದರಿ ಪರಾರಿಯಾಗಿದ್ದು, ಕಳ್ಳರ ಪತ್ತೆಗೆ ಚಾಮರಾಜನಗರ ಗ್ರಾಮಾಂತರ ಪೊಲೀಸರು ಮುಂದಾಗಿದ್ದಾರೆ. ಕಳ್ಳತನಕ್ಕೆ ಯತ್ನಸಿದ ದೇವಾಲಯ ಗ್ರಾಮದ ಕೂಗಳತೆ ಅಂತರದಲ್ಲಿದೆ.
ಚಾಲಕಿ ಕಳ್ಳರ ಬಂಧನಕ್ಕೆ ಗ್ರಾಮಾಂತರ ಪೊಲೀಸರು ಯತ್ನಿಸಿದ್ದು, ದೇವಾಲಯದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಿಂದ ಪೊಟೋಜ್ ಗಳನ್ನು ಸಂಗ್ರಹಿಸಿದ್ದಾರೆ.