ಮೈಸೂರು : ಕಾವೇರಿ ಹೋರಾಟಕ್ಕೆ ಚಿತ್ರ ರಂಗದ ನಟರು ಭಾಗಿಯಾಗದ ವಿಚಾರಕ್ಕೆ ಮೈಸೂರಿನಲ್ಲಿ ನಟ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ ನೀಡಿದರು.
ಏಕಾ ಏಕಿ ನಾವು ಹೋರಾಟಕ್ಕೆ ದುಮುಕಲು ಸಾಧ್ಯವಿಲ್ಲ.
ಪ್ರಚಾರಕ್ಕೋಸ್ಕರ ಹೋರಾಟಕ್ಕೆ ದುಮುಕಿದ್ದಾರೆ ಎನ್ನುತ್ತಾರೆ.ನಾವು ಚಿಕ್ಕವರು ಇತ್ತೀಚಿಗಷ್ಟೇ ಬಂದವರು.
ನಾವು ಹೋರಾಟ ಮಾಡಿದ್ರೆ ಯಾರೋ ಮೀನು ಹಿಡಿತ ಇದ್ದವ್ರು ಬಂದಿದ್ದಾರೆ ಅಂತಾರೆ.ಒಂದೆರಡು ಸಿನಿಮಾ ಹಿಟ್ ಆದ ತಕ್ಷಣ ಅಧಿಕ ಪ್ರಸಂಗ ಮಾಡುತ್ತಿದ್ದಾರೆ ಅಂತ ಹೇಳುತ್ತಾರೆ.ಆಗಾಗಿ ಚಿತ್ರ ರಂಗ ಕರೆ ನೀಡದೆ ಹೋರಾಟಕ್ಕೆ ದುಮುಕಲು ಸಾಧ್ಯವಿಲ್ಲ.ಚಿತ್ರರಂಗ ಕರೆ ನೀಡಿದ್ರೆ ಖಂಡಿತ ಹೋರಾಟದಲ್ಲಿ ಭಾಗಿಯಾಗುತ್ತೇವೆ ಎಂದರು.
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ವಿಚಾರ.
ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರು ಶಾಶ್ವತ ಪರಿಹಾರ ಸಿಕ್ಕಿಲ್ಲ.ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದರಲ್ಲೇ ಕಾಲ ವಿಳಂಬವಾಗುತ್ತೆ.
ಕಾವೇರಿ ವಿಚಾರ ನಮಗೆ ಕೋಪ ಬರಿಸುತ್ತೆ.
ಎಲ್ಲಾ ಪಕ್ಷಗಳು ತಮ್ಮ ಪಕ್ಷ ಸಿದ್ದಾಂತವನ್ನ ಬದಿಗಿಟ್ಟು ಒಟ್ಟಾಗಿ ಹೋರಾಟ ಮಾಡಬೇಕಿದೆ.
ಆಗ ಮಾತ್ರ ಶಾಶ್ವತ ಪರಿಹಾರ ಸಿಗುತ್ತೆ ಎಂದು ನಟ ಪ್ರಮೋದ್ ಶೆಟ್ಟಿ ಅಭಿಪ್ರಾಯ ಹಂಚಿಕೊಂಡರು