ಮೈಸೂರು : ಕಾವೇರಿ ವಿಚಾರವಾಗಿ ಸ್ಯಾಂಡಲ್ ವುಡ್ ನಟರು ಮೌನ ವಿಚಾರಕ್ಕೆ ನಟ ರಾಘವೇಂದ್ರ ರಾಜಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ನೆಲ ಜಲ ಭಾಷೆ ವಿಚಾರಕ್ಕೆ ನಮ್ಮ ಪ್ರಾಣ ಕೊಡಲು ಸಿದ್ಧ ಎಂದು ನಮ್ಮ ತಂದೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಇಡೀ ಕುಟುಂಬ ಸಿನಿಮಾ ಇಂಡಸ್ಟ್ರಿ ರೈತರ ಜೊತೆ ನಿಲ್ಲುತ್ತೇವೆ.ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ನಟ ರಾಘವೇಂದ್ರ ರಾಜಕುಮಾರ್.ಇದು ಸರ್ಕಾರಕ್ಕೆ ಬಿಟ್ಟ ವಿಚಾರ.ಸರ್ಕಾರ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಿದೆ.
ಜನರು ಎಲೆಲ್ಲಿ ಕರೆತ್ತಾರೋ ಅಲ್ಲಿಗೆ ನಾವು ಹೋಗಾಬೇಕಾಗುತ್ತೆ ಎಂದರು.
ನಾವು ಬರಿ ಸಿನಿಮಾ ತೋರಿಸ್ಲಿಕೆ ಅಲ್ಲ.
ನೆಲ, ಜಲ, ಭಾಷಗೆ ಕಷ್ಟ ಬಂದಾಗ ನಾವು ಹೋಗಲೇಬೇಕು. ಆ ದಿನಗಳ ಹತ್ತಿರ ಬಂದಾಗ ಕರೆ ಬರುತ್ತೆ.ಫಿಲ್ಮ್ ಚೇಂಬರ್ ನಿಂದ ಕರೆ ಬರುತ್ತೆ ಅವಾಗ ನಾವು ಹೋರಾಟಕ್ಕೆ ದುಮ್ಮುಕ್ಕುತ್ತೇವೆ.
ಒಬ್ಬ ಒಬ್ಬರೇ ಬಂದರೆ ಹೆಸರು ಮಾಡಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ ಅಂತಾರೇ.ಫಿಲ್ಮ ಚೇಂಬರ್ ನಿಂದ ಬರುವ ಕರೆಗೆ ನಾವು ಕಾಯುತ್ತಿದ್ದೇವೆ.ಅಲ್ಲಿ ಹೋರಾಟದ ರೂಪುರೇಷೆ ಸಿದ್ಧ ಪಡಿಸುತ್ತೇವೆ.ಆ ದಿನಕ್ಕೆ ಕಾಯುತ್ತಿದ್ದೇವೆ.
ರೈತರ ಹೋರಾಟಕ್ಕೆ ಕರೆದರೆ ಹೋಗುವುದಲ್ಲ ಹೋಗಲೇ ಬೇಕು ಎಂದರು.
ಇದು ನಮ್ಮ ಧರ್ಮ. ರಾಜಕುಮಾರ್ ಅವರೇ ಬೇರೆ.
ಅವರು ಒಬ್ಬರು ನಿಂತರೇ ಇಡೀ ಇಂಡಸ್ಟ್ರಿ ಅವರ ಪರವಾಗಿ ನಿಲ್ಲುತ್ತಿತ್ತು.ಆ ಜಾಗ ತುಂಬಿಸಲು ಸಾಧ್ಯವಿಲ್ಲ.
ಫಿಲ್ಮ್ ಅಸೋಸಿಯೇಷನ್ ನಿಂದ ಇನ್ನೂ ಯಾವುದೇ ಕರೆ ಬಂದಿಲ್ಲ. ರೈತರು ಹೋರಾಟಕ್ಕೆ ನಮ್ಮ ಕರೆದಿಲ್ಲ.
ಕರೆದ ತಕ್ಷಣ ನಾವು ಬರುತ್ತೇವೆ. ನಿಯಮದ ಪ್ರಕಾರವೇ ನಾವು ಹೋರಾಟದಲ್ಲಿ ಭಾಗಿಯಾಗುತ್ತೇವೆ.
ಒಬ್ಬೊಬ್ಬರೆ ಹೋರಾಟದಲ್ಲಿ ಭಾಗಿಯಾಗಬಾರದು.
ಎಲ್ಲ ರಾಜಕುಮಾರ್ ಆಗಲು ಸಾಧ್ಯವಿಲ್ಲ.
ರಾಜಕುಮಾರ್ ಸ್ಥಾನ ತುಂಬಲು ಯಾರಿಂದಲೂ ಸಾಧ್ತವಿಲ್ಲ. ಆ ಶಕ್ತಿ ಯಾರಲ್ಲಿ ಇದೇ ನೀವೇ ಹೇಳಿ.
ಎಲ್ಲಾ ಸೇರಿದರೆ ಮಾತ್ರ ರಾಜಕುಮಾರ್ ಆಗಲು ಸಾಧ್ಯ ಎಂದರು