ಮೈಸೂರು : ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದ ರೈತ ಕೃಷ್ಣನಾಯಕ ಮತ್ತು ಮಾದೇವಿ ಬಾಯಿ ಎಂಬವರ ಪುತ್ರ ಚರಣ್ ನಾಯಕ್ (9)ವರ್ಷ ಸೋಮವಾರ ಶಾಲೆ ಮುಗಿಸಿಕೊಂಡು ತನ್ನ ತಂದೆ ತಾಯಿಯಿದ್ದ ಜಮೀನಿಗೆ ಹೋದಾಗ ಹುಲಿ ದಾಳಿ ನಡೆಸಿ ಬಲಿ ಪಡೆದಿದ್ದ ಹುಲಿ ಯನ್ನು ಮಂಗಳವಾರ ಸಂಜೆ 7 ಗಂಟೆ ಸಮಯದಲ್ಲಿ, ಕಲ್ಲಟಿ ಗ್ರಾಮದ ತಾವರೆ ನಾಯಕ ಎಂಬುವರ ಜಮೀನಿನ ಬಳಿ ಅರವಳಿಕೆ ವೈದ್ಯರಾದ ರಮೇಶ್ ರಂಜನ್ ಇವರುಗಳು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹುಲಿಗೆ ಅರವಳಿಕೆ ಹೊಡೆದು ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು ಯಶಸ್ವಿಯಾಗಿದ್ದಾರೆ.
ಹುಲಿ ಸೆರೆ ಹಿಡಿದ ಪರಿಣಾಮ ಕಲ್ಲಟ್ಟಿ ಗ್ರಾಮದ, ಹಾಗೂ ಸುತ್ತಮುತ್ತಲಿನ ಗ್ರಾಮದ ಜನತೆ ನಿಟ್ಟುಸಿರುಬಿಟ್ಟಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸಿಎಫ್ ರಂಗಸ್ವಾಮಿ, ದಯಾನಂದ್, ಅಂತರಸಂತೆ ವಲಯ ಅರಣ್ಯ ಅಧಿಕಾರಿ ಭರತ್, ಅರವಳಿಕೆ ವೈದ್ಯರಾದ ರಮೇಶ್ ರಂಜನ್ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.