ಮೈಸೂರು : ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಬಹಳ ದೊಡ್ಡ ಮಟ್ಟಕ್ಕೆ ಏರಲು ಸರಕಾರಗಳು ಎಷ್ಟು ಕಾರಣವೋ ಅಷ್ಟೆ ಕಾರಣ ಈ ನಾಡಿನ ಶ್ರೀಮಠಗಳು ಎಂದು ನಿರ್ಮಲಾನಂದ ಸ್ವಾಮೀಜಿ ಹೇಳಿದರು.
ಚುಂಚನಗಿರಿ ಮಠದ ಸಂಸ್ಥೆಗಳಲ್ಲಿ ಒಂದೂವರೆ ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಕೆಂಪೇಗೌಡರ ಜಯಂತಿ ಮಾಡಿ ಎಂದು ಸಿದ್ದರಾಮಯ್ಯ ರನ್ನು ಕೇಳಿದ್ದಾಗ ಸಿದ್ದರಾಮಯ್ಯ ರು ನನಗೆ ಯಾಕೆ ಒತ್ತಡ ಅಂತಾ ಕೇಳಿದ್ದರು.ಆದರೂ ನಂತರ ಕೆಂಪೇಗೌಡರ ಜಯಂತಿಯನ್ನು ಸರಕಾರದಿಂದ ಘೋಷಿಸಿದರು.
ಕೆಂಪೇಗೌಡರ ಅಭಿವೃದ್ಧಿ ಪ್ರಾಧಿಕಾರವನ್ನು ಕೂಡ ಸಿದ್ದರಾಮಯ್ಯ ಸ್ಥಾಪಿಸಿದರು ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಒಂದು ಭಾಗಕ್ಕೆ ಕೆಂಪೇಗೌಡ ವಿವಿ ಎಂದು ಹೆಸರು ಇಡಿ
ಸಿಎಂ ಗೆ ಮನವಿ ಮಾಡಿದ ಚುಂಚನಗಿರಿ ಶ್ರೀಗಳು.
ತುಳಿತಕ್ಕೆ ಒಳಗಾದ ಸಮಾಜದ ಉದ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಶ್ರಮಿಸುತ್ತಿದ್ದಾರೆ ಎಂದರು.