ಮೈಸೂರು : ಗುಣಮಟ್ಟದ ವಿದ್ಯೆ ಕಲಿಯುವುದು ಅಗತ್ಯ.
ಓದುವುದು, ಬರೆಯುವುದು, ಮಾತಾಡುವುದು ಕಲಿತರೆ ಅದು ವಿದ್ಯೆ ಅಲ್ಲ.ವಿದ್ಯೆ ಕಲಿತು ಜಾತೀವಾದಿಗಳಾದರೆ ಅದರಿಂದ ಪ್ರಯೋಜನವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವೈಚಾರಿಕ ಮತ್ತು ವೈಜ್ಞಾನಿಕವಾದ ವಿದ್ಯೆ ಕಲಿಯಬೇಕು.
ಆಕಸ್ಮಿಕವಾಗಿ ಯಾವುದೋ ಜಾತಿ – ಧರ್ಮದಲ್ಲಿ ಹುಟ್ಟಿರುತ್ತೇವೆ.ಯಾವು ಮನುಷ್ಯತ್ವನಾವು ವಿಶ್ವಮಾನವ ರಾಗಬೇಕು. ಅಲ್ಪ ಮಾನವರಾಗಬಾರದು.
ಕೆಲವರು ಮನುಷ್ಯ – ಮನುಷ್ಯ ರಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಾರೆ.ಈ ಹುಳಿಗೆ ಯಾರು ಬಲಿಯಾಗಬಾರದು.
ಧರ್ಮಕ್ಕಾಗಿ ಮನುಷ್ಯನಿಲ್ಲ. ಧರ್ಮ ಇರೋದು ಮನುಷ್ಯ ನ ಒಳಿತಿಗಾಗಿ ಅಷ್ಟೆ.ಧರ್ಮಕ್ಕಾಗಿಯೇ ಮನುಷ್ಯನಿಲ್ಲ ಎಂದರು.
ಮನುಷ್ಯ – ಮನುಷ್ಯ ನನ್ನು ಪ್ರೀತಿ – ದಯೆಯಿಂದ ಕಾಣುವುದೇ ಧರ್ಮ.ಯಾವ ಧರ್ಮದಲ್ಲಿ ಪ್ರೀತಿ – ದಯೆ ಇಲ್ಲವೋ ಅದು ಧರ್ಮ ಅಲ್ಲನಾನು ಧರ್ಮದ ಬಗ್ಗೆ ಹೆಚ್ಚು ಮಾತಾಡಲ್ಲ.ಮಾತಾಡಿದರೆ ಅದು ಬೇರೆ ಬೇರೆ ರೀತಿ ಚರ್ಚೆಗೆ ಕಾರಣವಾಗುತ್ತದೆ ಎಂದು ಹೇಳಿದರು