ಮೈಸೂರು : ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ
ಶಾಸಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ದೇವೇಗೌಡರ ಜೊತೆ ಮಾತನಾಡಿರೋದು ನಿಜ.ಇದರ ಬಗ್ಗೆ ದೇವೇಗೌಡರೇ ಹೇಳಿಕೆ ನೀಡಿದ್ದಾರೆ.ಈಗಾಗಲೇ ಕಾಂಗ್ರೆಸ್ ನವರು ಸಿದ್ದರಾಮಯ್ಯ,ಡಿಕೆ ಶಿವಕುಮಾರ್,ಸಚಿವರು ರಿಯಾಕ್ಟ್ ಮಾಡಿದ್ದಾರೆ.ಇನ್ನೂ ಮೈತ್ರಿ ಹೊಂದಾಣಿಕೆ ಫೈನಲ್ ಆಗಿಲ್ಲ.
ಆಗಲೇ ಕಾಂಗ್ರೆಸ್ ನವರು ದೆವ್ವ ಬಂದಂಗೆ ಆಡ್ತಿದ್ದಾರೆ.
ಪಾರ್ಲಿಮೆಂಟ್ ಚುನಾವಣೆಗೆ ಜೆಡಿಎಸ್ ಬಿಜೆಪಿ ಹೊಂದಾಣಿಕೆ ಆಗುತ್ತೆ ಅನ್ನೋ ಭಯದಿಂದ ಮೈ ಮೇಲೆ ದೆವ್ವ ಬಂದಂಗೆ ಆಡ್ತಿದ್ದಾರೆ ಎಂದರು.
ಬಿಜೆಪಿ ಜೆಡಿಎಸ್ ಹೊಂದಾಣಿಕೆಯಾದರೆ ಕಾಂಗ್ರೆಸ್ ಒಂದು ಸೀಟ್ ಗೆಲ್ಲಲಿಕ್ಕೆ ಆಗಲ್ಲ.ಬಿಜೆಪಿ ಜೆಡಿಎಸ್ ಹೊಂದಾಣಿಕೆಯಿಂದ ಭಯ ಇಲ್ಲ ಎಂದ ಮೇಲೆ ಯಾಕೆ ರಿಯಾಕ್ಟ್ ಮಾಡಬೇಕು.ಕಾರ್ಯಕರ್ತರ ಅಭಿಪ್ರಾಯ ಸಹ ಹೊಂದಾಣಿಕೆಯಾದ್ರೆ ಒಳ್ಳೆಯದು ಎಂದು ತಿಳಿಸಿದ್ದಾರೆ.
ಆದರೆ ಎಲ್ಲಾ ತೀರ್ಮಾನ ಮಾಡುವುದು ಪ್ರಧಾನಿ ನರೇಂದ್ರ ಮೋದಿಯವರು.ಸೀಟ್ ಹಂಚಿಕೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ.ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು

