ಮೈಸೂರು : ಲೋಕಸಭಾ ಚುನಾವಣೆಗೆ ನಿಗದಿ ಮುನ್ನವೇ ನಾಯಕರ ನಡುವೆ ಟಾಕ್ ಫೈಟ್ ಶುರುವಾಗಿದೆ.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಗೆಲ್ಲಲ್ಲು ಬಿಜೆಪಿ ಕಾಂಗ್ರೆಸ್ ಭಾರಿ ಪೈಪೋಟಿ ನಡೆಸುತ್ತಿವೆ. ಕಳೆದ ಎರಡು ಬಾರಿ ತವರಲ್ಲಿ ಮುಖಭಂಗ ಅನುಭವಿಸಿರುವ ಸಿಎಂ ಸಿದ್ದರಾಮಯ್ಯ ಈ ಬಾರಿ ಮಗನನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಬೇಕು ಎಂಬ ಹಠದಲ್ಲಿ ಇರುವಂತೆ ಕಾಣಿಸುತ್ತಿದೆ.
ಇದಕ್ಕೆ ಪೂರಕ ಎಂಬಂತೆ ಪ್ರತಾಪ್ ಸಿಂಹ ನನ್ನು ಗೆಲ್ಲಿಸಬೇಡಿ ಎಂದು ಸಿದ್ದು ಮೈಸೂರಿನ ಉದಯಗಿರಿಯಲ್ಲಿ ಕರೆ ಕೊಟ್ಟಿದ್ದಾರೆ
ಸಿದ್ದು ಹೇಳಿಕೆ ಹಿಂದೆ ಭಾರಿ ಲೆಕ್ಕಾಚಾರ ಅಡಗಿದೆ ಎಂದು ರಾಜಕೀಯ ಪಡಾಲೆಯಲ್ಲಿ ಮಾತುಗಳು ಕೇಳಿ ಬರುತ್ತಿವೆ
ಲೋಕ ಸಭಾ ಚನಾವಣೆಯಲ್ಲಿ ತಮ್ಮ ಮಗನನ್ನು ಗೆಲ್ಲಿಸಿ ಎಂದು ಪರೋಕ್ಷ ಕರೆ ಕೊಟ್ರಾ ಸಿಎಂ ಸಿದ್ದರಾಮಯ್ಯ ಎನ್ನುವ ಚರ್ಚೆಗಳು ಕೂಡ ಆರಂಭವಾಗಿವೆ.
ಈಗಾಗಲೇ ಮೈಸೂರು ಲೋಕಸಭಾ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಯತೀಂದ್ರ ಸಿದ್ದರಾಮಯ್ಯ
ಸಿಎಂ ಸಿದ್ದು ಹೇಳಿಕೆಗೆ ಪ್ರತಾಪ್ ಸಿಂಹ ಕೌಂಟರ್ ಅಟ್ಯಾಕ್ ಕೂಡ ಮಾಡಿದ್ದಾರೆ. ನೀವು ನನ್ನನು ಸೋಲಿಸಿ ಎಂದು ಕರೆ ಕೊಟ್ಟ ಜಾಗ ಉದ್ದೇಶ ಎರಡು ಅರ್ಥ ಆಗಿದೆ
ದಲಿತರು ಕೇರಿಯಲ್ಲಿ ಇರ್ಬೇಕು ಮುಸ್ಲಿಂಮರು ಮೊಹಲ್ಲಾದಲ್ಲಿ ಇರ್ಬೇಕು ಸಿದ್ದರಾಮಯ್ಯ ಮತ್ತು ಮಕ್ಕಳು ಸದಾಶಿವನಗರದಲ್ಲಿ ಇರ್ಬೆಕಾ ?
ಬಡವರ ಮಕ್ಕಳು ಬೇಳಿಯೋದು ಬೇಡ್ವಾ ಎಂದು
ಸಿಎಂ ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಪ್ರಶ್ನೆಗಳ ಸುರಿಮಳೆ ಹಾಕಿದ್ದಾರೆ.
ನನ್ನ ಸೋಲಿಸಲು 10 ಕಾರಣ ಕೊಡಿ ಗ್ರೇಟರ್ ಮೈಸೂರು ಮಾಡಲು ಅಡ್ಡಗಾಲು ಹಾಕ್ತಿದ್ದಿರಾ
40 ವರ್ಷದಿಂದ ನೀವೇನ್ ಕೆಲ್ಸ ಮಾಡಿದ್ದೀರಾ ಹೇಳಿ
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಕಿಡಿಕಾರಿದ್ದು ನಾಯಕರ ವಾಕ್ ಸಮರದಿಂದ ಮತ್ತಷ್ಟು ರಂಗೇರುತ್ತಿದೆ ಮೈಸೂರು ಲೋಕಸಭಾ ಅಖಾಡ