ಮೈಸೂರು : ಪ್ರತಾಪ್ ಸಿಂಹನನ್ನು ಈ ಬಾರಿ ಸೋಲಿಸಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ
ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಸಿಎಂ ಯಾವ ಬಡಾವಣೆಯಲ್ಲಿ ನಿಂತು ನನ್ನ ಸೋಲಿಸಿ ಅಂತಾ ಹೇಳಿದ್ದಾರೆ ಎಂಬುದು ನೋಡಿದೆ.
ಮೈಸೂರಿನ ಕುವೆಂಪು ನಗರದಲ್ಲೋ, ಸರಸ್ವತಿ ಪುರಂ ನಲ್ಲೋ ಸಿದ್ದಾರ್ಥ ಬಡಾವಣೆಯಲ್ಲೋ ಬಂದು ಸಿಎಂ ಈ ರೀತಿ ಹೇಳೋಕೆ ಆಗಲ್ಲ.ಉದಯಗಿರಿಯಲ್ಲಿ ಸಿದ್ದರಾಮಯ್ಯ ಅವರ ಬಾಂಧವರ ಮುಂದೆ ಹೋಗಿ ಕೈ ಮುಗಿದು ನನ್ನ ಸೋಲಿಸಲು ಕರೆ ಕೊಟ್ಟಿದ್ದಾರೆ.
ತಮ್ಮ ಬಾಂಧವರ ಉದ್ಧಾರಕ್ಕೆ ಮಾತ್ರ ಸಿದ್ದರಾಮಯ್ಯ ಇರೋದು ಎಂಬುದು ನನಗೆ ಗೊತ್ತು.
ತಮ್ಮ ಬಾಂಧವರ ಮುಂದೆ ಕೈ ಮಗಿದು ನನ್ನ ಸೋಲಿಸಿ ಅಂತಾ ಕೇಳುವ ದೈನಾಸಿ ಸ್ಥಿತಿ ಸಿಎಂಗೆ ಬರಬಾರದಿತ್ತು ಎಂದು ವ್ಯಂಗ್ಯವಾಡಿದರು.
ನನ್ನನ್ನು ಯಾಕೆ ಯಾಕೆ ಜನ ಸೋಲಿಸ ಬೇಕು ಅಂತಾ ಸಿಎಂ ಐದತ್ತು ಕಾರಣ ಕೊಡಲಿ
ಹೈವೆ ಮಾಡಿಸಿದ್ದು ನನ್ನ ತಪ್ಪಾ? ಗ್ರೇಟರ್ ಮೈಸೂರು ಮಾಡಲು ಹೊರಟ್ಟಿದ್ದು ತಪ್ಪಾ? ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಲು ಹೊರಟ್ಟಿದ್ದು ತಪ್ಪಾ? ಚಾಮುಂಡಿ ಬೆಟ್ಟದ ಅಭಿವೃದ್ಧಿ ಮಾಡುತ್ತಿರುವುದು ತಪ್ಲಾ?
ಯಾವ ಕಾರಣಕ್ಕೆ ಮೈಸೂರು ಜನ ಪ್ರತಾಪ್ ಸಿಂಹನನ್ನು ಸೋಲಿಸಬೇಕು ಹೇಳಿ?
40 ವರ್ಷದಿಂದ ಸಿದ್ದರಾಮಯ್ಯ ರಾಜಕೀಯದಲ್ಲಿದ್ದಾರೆ.
ಮೈಸೂರಿಗೆ ಮಾಡಿರುವ ಕೆಲಸ ಏನೂ ಎಂಬುದು ಹೇಳಲಿ.
ಕೆಲಸ ಮಾಡಿದವನನ್ನು ಸೋಲಿಸಬೇಕು ಅಂತಾ ಕೈ ಮುಗಿದು ಸಿಎಂ ಕೇಳಿದರೆ ಜನ ಅದನ್ನು ಒಪ್ಪುತ್ತಾರಾ?
ಸಿದ್ದರಾಮಯ್ಯ ಅವರಿಗೆ
ಬಡವರ ಮಕ್ಕಳ ಉದ್ಧಾರವಾಗಬಾರದು.
ಬಡವರ ಮಕ್ಕಳು ಬೇಳಿಬಾರದು. ಅವರು ಅವರ ಮಕ್ಕಳು ಮಾತ್ರ ರಾಜಕಾರಣ ಮಾಡುತ್ತಾ ಆರಾಮಾಗಿ ಸದಾಶಿವನಗರದಲ್ಲಿ ಇರಬೇಕು ಅಷ್ಟೆ ಎಂದರು.
ಮಹಿಷಾ ದಸರಾ ಆರಂಭ ಮಾಡಿ ಮೈಸೂರಿನ ಸ್ವಾಸ್ಥ್ಯ ಕೆಡಿಸಿದ್ದು ಸಿದ್ದರಾಮಯ್ಯ ತಾನೇ?
ಟಿಪ್ಪು ಜಯಂತಿ ಮಾಡಿ ರಾಜ್ಯದ ಸೌಹಾರ್ದತೆ ಕೆಡಿಸಿದ್ದು ಸಿದ್ದರಾಮಯ್ಯ ತಾನೇ?
ಟಿಪ್ಪು ಜಯಂತಿ ಹಿನ್ನಲೆಯಲ್ಲಿ ಸಾಲು ಸಾಲು
ಹಿಂದೂ ಕಾರ್ಯಾಕರ್ತ ಕೊಲೆಯಾಯಿತು.
ಇದಕ್ಕೆ ಯಾರು ಕಾರಣ?
ಸಿದ್ದರಾಮಯ್ಯ ಪ್ರತಿ ಬಾರಿಯು ಮೋದಿ ವಿರುದ್ದ ಮಾತಾಡುತ್ತಾರೆ.
ಇದು ಒಂಥರ ಆಕಾಶದ ಕಡೆ ಮುಖ ಮಾಡಿ ಉಗಿದಂತೆ.
ಈ ಕೆಲಸವನ್ನು ನಿರಂತರವಾಗಿ ಸಿದ್ದರಾಮಯ್ಯ ಮಾಡುತ್ತಲೆ ಇದ್ದಾರೆ ಎಂದು ಸಂಸದ ಪ್ರತಾಪ ಸಿಂಹ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು