ಚಾಮರಾಜನಗರ : ಮೈಸೂರು ಜಂಬೂಸವಾರಿಗೆ ಆಗಮಿಸುವ ಗಜಪಡೆಗೆ ವೀರನಹೊಸಹಳ್ಳಿಯ ಗಜಪಡೆಗಿಂತ ಮುಂಚಿತವಾಗಿ ರಾಂಪುರ ಆನೆ ಶಿಬಿರದಲ್ಲಿ ಚಾಲನೆ ನೀಡಲಾಗಿದೆ.
ಬಂಡಿಪುರದ ರಾಂಪುರ ಶಿಬಿರದಲ್ಲಿ ಎರಡು ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಸ್ಥಳೀಯ ಶಾಸಕ ಗಣೇಶ್ ಪ್ರಸಾದ್ ಚಾಲನೆ ನೀಡಿದರು.
ನಾಳೆ ವೀರನ ಹೊಸಹಳ್ಳಿಯಲ್ಲಿ ಗಜಪಡೆಗೆ ಪೂಜೆ.
ಅದಕ್ಕೂ ಮುನ್ನ ಬಂಡಿಪುರದ ರಾಂಪುರ ಶಿಬಿರದ ಎರಡು ಆನೆಗಳು ಮೈಸೂರಿತ್ತ ಪಯಣಕ್ಕೆ ಸಿದ್ದ.
ರೋಹಿತ್ ಮತ್ತು ಕಲ್ಪನ ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಮೈಸೂರಿಗೆ ಬೀಳ್ಕೊಟ್ಟ ಶಾಸಕ ಗಣೇಶ್ ಪ್ರಸಾದ್ಮದ್ದೂರು ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ಚಾಲನೆ.ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ಆಗಮಿಸುತ್ತಿರುವ ರೋಹಿತ್ ಮತ್ತು ಹಿರಣ್ಯ ಎಂಬ ಆನೆಗಳು.
ಕಳೆದ ಬಾರಿ ಪಾರ್ಥ ಸಾರಥಿ ಮತ್ತು ಚೈತ್ರ ಆನೆ ಭಾಗಿ.
ಪಾರ್ಥ ಸಾರಥಿ ಮತ್ತು ಚೈತ್ರ ಈ ಬಾರಿ ಗೈರು.
ಅವುಗಳ ಬದಲಿಗೆ ರೋಹಿತ್ ಮತ್ತು ಹಿರಣ್ಯ ಆನೆಗಳ ಆಯ್ಕೆ. ಬಂಡಿಪುರ ಡಿಸಿಎಫ್ ಪ್ರಭಾಕರನ್ ತಹಶಿಲ್ದಾರ್ ರಮೇಶ್ ಬಾಬು ಸೇರಿದಂತೆ ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು