ಮೈಸೂರು : ಕೇರಳದಲ್ಲಿ ಆಫ್ರಿಕನ್ ಸ್ಟೈನ್ ಫೀವರ್(African swine Fever) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ತಹಶೀಲ್ದಾರ್ ಸಣ್ಣ ರಾಮಪ್ಪ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ,ಡಾ” ಟಿ. ರವಿಕುಮಾರ್ ರವರು ಮತ್ತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ ” ಪ್ರಸನ್ನ B.B ಮತ್ತು ತಂಡದವರು ಕೇರಳ ಮತ್ತು ಕರ್ನಾಟಕ ಗಡಿಭಾಗವಾದ ಬಾವಲಿ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲನೆ ಮತ್ತು ಮೇಲ್ವಿಚಾರಣೆ ನಡೆಸಿದರು,
ನಂತರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕರು ಮಾತನಾಡಿ ಆಫ್ರಿಕನ್ ಸ್ಟೈನ್ ಫೀವರ್ ಆಗಸ್ಟ್ ಮೊದಲ ವಾರ ಕೇರಳದಲ್ಲಿ
ಪತ್ತೆಯಾಗಿದೆ. ಇದರ ಮುಖ್ಯ ಲಕ್ಷಣಗಳು ಹಂದಿಗಳಲ್ಲಿ.ಜ್ವರ ,ಮುಖ ಮತ್ತು ದೇಹದಲ್ಲಿ ಕೆಪ್ಪು ಬಣ್ಣದ ಗುಳ್ಳೆಗಳು, ಬಾಯಿಯಲ್ಲಿ ಜೊಲ್ಲು ಸುರಿಯುವುದು, ವಾಂತಿ, ಬೇಧಿ ,ಇರುತ್ತದೆ.
ಈ ರೋಗವು ಪ್ರಾಣಿಗಳಿಂದ ಪ್ರಾಣಿಗಳಿಗೆ, ಹರಡುತ್ತದೆ.ಯಾವುದೇ ಕಾರಣಕ್ಕೂ ಮನುಷ್ಯರಿಗೆ ಹರಡುವುದಿಲ್ಲ.
ಆಫ್ರಿಕನ್ ಸ್ಟೈನ್ ಫೀವರ್, ಮಾರಣಾಂತಿಕ ಕಾಯಿಲೆ ಯಾಗಿದು ಇದಕ್ಕೆ ಯಾವುದೇ ಚಿಕಿತ್ಸೆ ಇರುವುದಿಲ್ಲ.ಹಾಗೂ ಕೇರಳದಲ್ಲಿ ಜಾನುವಾರು ಗಳಿಗೆ ಕಾಲು ಬಾಯಿ ಜ್ವರ ಕಾಣಿಸಿ ಕೂಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ DB ಕುಪ್ಪೆ ಮತ್ತು ಬಾವಲಿ ಸುತ್ತ ಮುತ್ತಲಿನ ಗ್ರಾಮದಲ್ಲಿ ಜಾನುವಾರು ಗಳಿಗೆ ಲಸಿಕೆಯನ್ನು ಹಾಕುತ್ತಿದ್ದೇವೆ ಎಂದು ತಿಳಿಸಿದರು.
ತಹಶೀಲ್ದಾರ್ ರವರು ಮಾತನಾಡಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ
2 ತಂಡವನ್ನು ರಚನೆ ಮಾಡಿ, ಒಂದು ತಂಡ ಬೆಳಗ್ಗೆ 6:00 ಯಿಂದ ಮಧ್ಯಾಹ್ನ 2:00 ಗಂಟೆ ಇನ್ನೊಂದು ತಂಡ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆ ತನಕ ಕರ್ತವ್ಯ ನಿರ್ವಹಿಸಬೇಕು ,
ಕೇರಳದಿಂದ ಪ್ರಾಣಿಗಳ ಸಾಗಣೆಯನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಹಾಗೂ ಮಾಂಸ ಮಾರಾಟವನ್ನು ಸಂಪೂರ್ಣ ವಾಗಿ ನಿಷೇಧಿಸಿ ಇದರ ಬಗ್ಗೆ ತಾಲ್ಲೂಕು ಆಡಳಿತ ಕಟ್ಟು ನಿಟ್ಟಿನ ಕ್ರಮವಹಿಸಲು ಸೂಚಿಸಲಾಗಿದೆ .ಹಾಗೂ ಇದೆ ಸಂದರ್ಭದಲ್ಲಿ ಹಂದಿ ಮಾಂಸ ಮಾರಾಟ ಮಾಡುವ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಲಾಯಿತು.
ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ ಜನರಿಗೆ ಯಾವುದೇ ಜ್ವರ ಕಾಣಿಸಿಕೊಂಡರು ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ಮಾಡಿ ಜನರಿಗೆ ಸಾಂಕ್ರಮಿಕ ಅರೋಗದ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ ಮಾಹಿತಿಯನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ವರದಿ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿಅರಣ್ಯ ಅಧಿಕಾರಿ ರಾಘವೇಂದ್ರ,ಆರೋಗ್ಯ ಇಲಾಖೆ ರವಿರಾಜ್ , ವನಸಿರಿ ಉಮೇಶ್ , ರವಿ,ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗ,ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಇನ್ನಿತರರು ಉಪಸ್ಥಿತರಿದ್ದರು.