ಚಾಮರಾಜನಗರ : ನಿಧಿ ಆಸೆಗಾಗಿ ಮನೆಯಲ್ಲೇ ಗುಂಡಿ ತೋಡಿದ ಘಟನೆ ಹನೂರು ತಾಲ್ಲೂಕಿನ ಒಡೆಯರ ಪಾಳ್ಯ ಸಮೀಪದ ವಿ.ಎಸ್ ದೊಡ್ಡಿ ಗ್ರಾಮದ ಭಾಗ್ಯ ಎಂಬುವವರ ಮನೆಯಲ್ಲಿ ನಡೆದಿದೆ.
ಮನೆಯ ವಾಸ್ತು ಸರಿ ಇಲ್ಲ ಎಂದು ಮನೆ ಬಿಟ್ಟು ಬೆಂಗಳೂರಿನಲ್ಲಿ ನೆಲೆಸಿದ್ದ ಭಾಗ್ಯ ಎಂಬ ಮಹಿಳೆ.
ಗ್ರಾಮದ ಪರಶಿವ ಎಂಬ ವ್ಯಕ್ತಿ ಭಾಗ್ಯಳನ್ನ ಜೋತಿಷಿ ಬಳಿ ಕರೆದುಕೊಂಡು ಹೋಗಿ ಶಾಸ್ತ್ರ ಕೇಳಿದ್ದರು.
ಮನೆಯಲ್ಲಿ ನಿಧಿ ಇದೆ ಎಂದು ತಿಳಿಸಿದ್ದ ಜೋತಿಷಿ.
ಭಾಗ್ಯ ಎಂಬ ಮಹಿಳೆ ಮತ್ತು ಜೋತಿಷಿ ತಮ್ಮ ಇತರೆ ಸಹಚರರ ಸಮ್ಮುಖದಲ್ಲಿ ಮನೆಯ ಒಳಗೆ ಕಳಸವಿಟ್ಟು ವಿಶೇಷ ಪೂಜೆ ಸಲ್ಲಿಕೆ. ಯಾರಿಗೂ ಗೊತ್ತಾಗದ ಹಾಗೆ ಗುಂಡಿ ತೆಗೆಸಿದ ಭಾಗ್ಯ ಎಂಬ ಮಹಿಳೆ.
3 ಅಡಿ ಅಗಲ, 20 ಅಡಿ ಆಳದ ಗುಂಡಿ ತೆಗೆದು ನಿಧಿಗಾಗಿ ಶೋಧನೆ.
ಮಾಹಿತಿ ತಿಳಿದ ಅಕ್ಕಪಕ್ಕದ ಜನರಿಂದ ಪೋಲಿಸರಿಗೆ ಮಾಹಿತಿ.ಸ್ಥಳಕ್ಕೆ ಪೋಲಿಸರು ಆಗಮಿಸುತ್ತಿದ್ದಂತೆ ಜೋತಿಷಿ ಮತ್ತು ಜೊತೆಗಿದ್ದವರು ಪರಾರಿ.ರಾಮಾಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಇಂದಿನ ಆಧುನಿಕ ಯುಗದಲ್ಲೂ ಇಂತಹ ಮೌಢ್ಯರು ಇರುವುದನ್ನ ಕಂಡು ಬೆರಗಾದ ಪೋಲಿಸರು.