– ಗೂಡ್ಸ್ ವಾಹನ ಪ್ರಿಯರಿಗೆ ಗುಡ್ ನ್ಯೂಸ್
– ಮೊದಲ ಬಾರಿಗೆ ಮೈಸೂರಿನಲ್ಲಿ XL ಕಾರ್ಗೋ OBD2A ಲಾಂಚ್
ಮೈಸೂರು: ಮೈಸೂರು ವಾಹನ ಮಾರುಕಟ್ಟೆಗೆ ಹೊಸ XL ಕಾರ್ಗೋ ಗೂಡ್ಸ್ ಆಟೋ ಲಗ್ಗೆಯಿಟ್ಟಿದೆ ಇಂದು ಮೈಸೂರಿನ ಹೆಬ್ಬಾಳದಲ್ಲಿರುವ ಬಜಾಜ್ BB ಮೋಟಾರ್ಸ್ ಶೋರೂಮ್ ನಲ್ಲಿ ಇದೆ ಮೊದಲ ಬಾರಿಗೆ ಲಾಂಚ್ ಆಗಿದೆ.
ಬಜಾಜ್ ಕಂಪೆನಿಯ ಏರಿಯಾ ಸೇಲ್ಸ್ ಮ್ಯಾನೇಜರ್ ವೆಂಕಟೇಶ್ ಬಿಬಿ ಮೋಟಾರ್ಸ್ ಮಾಲೀಕರಾದ ವಿನಯ್ ಕುಮಾರ್ ಹಾಗೂ ಮ್ಯಾನೇಜರ್ ಪ್ರವೀಣ್, ರಾಜೇಶ್ ಸೇಲ್ಸ್ ಮ್ಯಾನೇಜರ್ ಮನೋಹರ್ ಹಾಗೂ ಸಿಬ್ಬಂದಿ ವರ್ಗ ಈ ಹೊಸ ಆಟೋವನ್ನು ಲೋಕಾರ್ಪಣೆ ಮಾಡಿದ್ದಾರೆ. ಮೈಸೂರಿನ ನಂಬರ್ ಒನ್ ಆಟೋ ಸೇಲ್ಸ್ ಎಂದೇ ಪ್ರಸಿದ್ಧಿಯಾಗಿರುವ BB ಮೋಟಾರ್ಸ್ ಈಗ ಮತ್ತೊಂದು ಗರಿಗೆ ಭಾಜನವಾಗಿದೆ.
ಹೊಸ ಕಾರ್ಗೋ ಆಟೋ ನೋಡಲು ಸುಂದರವಾಗಿದ್ದು ಅನೇಕ ನೂತನ ವಿನ್ಯಾಸಗಳನ್ನು ಒಳಗೊಂಡಿದೆ. ಹೊಸ ಹೊಸ ಆವಿಷ್ಕಾರಗಳನ್ನೂ ಈ ಆಟೋದಲ್ಲಿ ನೋಡಬುದಾಗಿದ್ದು 470ಸಿಸಿ ಎಂಜಿನ್, ಲಾಂಗರ್ ವಿಲ್ ಬೇಸ್ 2274, ಲಾಂಗರ್ ಫ್ರೇ 6*6 12″ ರೇಡಿಯಲ್ ಟಯರ್ ಅನ್ನು ಹೊಂದಿದೆ.
ಗ್ರಾಹಕರಿಗೆ ಹೊಸತನ್ನು ನೀಡುವಲ್ಲಿ ಮೈಸೂರು ಬಿಬಿ ಮೋಟಾರ್ಸ್ ಸದಾ ಮುಂದೆ ಇದ್ದು, ಈಗ ಉತ್ತಮ ಹಾಗೂ ವಾಹನ ಪ್ರಿಯರಿಗೆ ಇಷ್ಟವಾಗುವ ರೀತಿಯಲ್ಲಿ ವಿನೂತನ ಗೂಡ್ಸ್ ಆಟೋವನ್ನು ಬಿಡುಗಡೆ ಮಾಡಿದೆ. ಅಲ್ಲದೆ ಗೂಡ್ಸ್ ಸಾಗಾಣಿಕೆ ಮಾಡುವಲ್ಲಿ ಜನರ ಸಹಾಯಕ್ಕೆ ಬರಲಿದೆ.