ಮೈಸೂರು: ಮೈಸೂರು ಜಿಲ್ಲಾ ಪೋಲೀಸರು ಭರ್ಜರಿ ಭೇಟೆಯಾಡಿದ್ದು ವಿವಿಧ ಪ್ರಕರಣಗಳಲ್ಲಿ ಕಳ್ಳತನವಾಗಿದ್ದ ವಸ್ತುಗಳ ಜಪ್ತಿ ಮಾಡಲಾಗಿದೆ.
ಒಟ್ಟು 63 ಪ್ರಕರಣಗಳಲ್ಲಿ 1ಕೋಟಿ 34 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ. ಇಂದು ವಶಪಡಿಸಿಕೊಂಡಿದ್ದ ಸ್ವತ್ತುಗಳನ್ನ ವಾರಸುದಾರರಿಗೆ ಪೋಲೀಸರು ಹಿಂದಿರುಗಿಸಿದ್ದಾರೆ. ಮೈಸೂರು ನಗರದ ಡಿಎಆರ್ ಮೈದಾನದಲ್ಲಿ ಡಿಐಜಿ ಬೋರಲಿಂಗಯ್ಯ ನೇತೃತ್ವದಲ್ಲಿ ಹಸ್ತಾಂತರ ಮಾಡಲಾಗಿದೆ.
ಕೊಲೆ,ದರೋಡೆ,ಸುಲಿಗೆ,ಸರಗಳ್ಳತನ,ವಾಹನ ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ವಸ್ತುಗಳು. ಚಿನ್ನ ಬೆಳ್ಳಿ ವಾಹನ ಕಾರು ಬೈಕ್ ಆಟೋ ಹಣ ಸೇರಿದಂತೆ ಒಟ್ಟು 1 ಕೋಟಿ 34 ಲಕ್ಷದ 66 ಸಾವಿರದ 697 ರೂಪಾಯಿ ಮೌಲ್ಯದ ವಸ್ತುಗಳನ್ನು ಕಳೆದುಕೊಂಡವರಿಗೆ ಪೊಲೀಸರು ವಾಪಸ್ ನೀಡಿದ್ದಾರೆ