ಮಂಡ್ಯ : ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್ ಅವರ ಅಸ್ಥಿಯನ್ನೂ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಕಾರ್ಯದಲ್ಲಿ ಭಾಗಿಯಾಗಲು ಆಗಮಿಸಿದ ಮೃತ ಸ್ಪಂದನ ಕುಟುಂಬಸ್ಥರು ಪತಿ ವಿಜಯ ರಾಘವೇಂದ್ರ ಪುತ್ರ ಶೌರ್ಯ ಶ್ರೀ ಮುರುಳಿ ಮಾವ ಚಿನ್ನೆಗೌಡ ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಅಸ್ಥಿ ತುಂಬಿದ ಕುಡಿಕೆ ಹಿಡಿದು ದುಃಖದಲ್ಲೇ ಆಗಮಿಸಿದ ವಿಜಯ್ ರಾಘವೇಂದ್ರ ಕಾವೇರಿ ನದಿ ಬಳಿಯ ಸ್ನಾನ ಘಟ್ಟ ಬಳಿ ವಿಸರ್ಜನೆ ಕಾರ್ಯ ನೆರವೇರಿಸಿದರು.