ಮೈಸೂರು : ಬೀದಿ ನಾಯಿಗಳ ರಕ್ಷಣೆಗಾಗಿ ಮೈಸೂರಿನ ಹೊರ ವಲಯ ರಾಯನಕೆರೆ ಸಮೀಪ ಸಂರಕ್ಷಣಾ ಕೇಂದ್ರ ತೆರೆಯಲಾಗಿದೆ ಎಂದು ಮೇಯರ್ ಶಿವಕುಮಾರ್ ಹೇಳಿದರು.
ಬಹುತೇಕ ಕಾಮಗಾರಿ ಹಂತಿಮ ಹಂತಕ್ಕೆ ಬಂದಿದೆ.
ನಮ್ಮ ಪಾಲಿಕೆ ಸದಸ್ಯರು ಸಹ ಕೌನ್ಸಿಲ್ ಸಭೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ದೂರು ನೀಡಿದ್ರು.
ಆಗಾಗಿ ನಗರ ವ್ಯಾಪ್ತಿಯಲ್ಲಿ ನಾಯಿಗಳ ಹಾವಳಿ ತಪ್ಪಿಸಲು ಪಾಲಿಕೆ ಕ್ರಮ ಕೈಗೊಂಡಿದೆ.ನಾಯಿಗಳ ಸಂರಕ್ಷಣಾ ಕೇಂದ್ರದಲ್ಲಿ ನಾಯಿಗಳ ಆರೋಗ್ಯದ ಬಗ್ಗೆ ಗಮನಹರಿಸಲು ವೈದ್ಯರು ಸಹ ಇರುತ್ತಾರೆ.ಅನಾರೋಗ್ಯ ಪೀಡಿತ,ಹುಚ್ಚು ಹಿಡಿದ ನಾಯಿಗಳಿಗೆ ಆಶ್ರಯ ನೀಡಲಾಗುತ್ತದೆ.
ನಮ್ಮೆಲ್ಲರ ಸದಸ್ಯರ ಜೊತೆ ಇಂದು ನಾಯಿ ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿದ್ದೇವೆ ಎಂದರು.
ಶೀಘ್ರದಲ್ಲೇ ನಾಯಿಗಳ ಸಂರಕ್ಷಣಾ ಕೇಂದ್ರವನ್ನ ಸಹ ಉದ್ಘಾಟನೆ ಮಾಡುತ್ತೇವೆ ಎಂದು ತಿಳಿಸಿದರು.
ಮೇಯರ್ ಅಧಿಕಾರ ಸೆಪ್ಟೆಂಬರ್ 5ಕ್ಕೆ ಕೊನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಕಳೆದ ವರ್ಷ ಸೆಪ್ಟೆಂಬರ್ 6ರಂದು ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿತ್ತು.
ಮುಂದಿನ ತಿಂಗಳು ಸೆಪ್ಟೆಂಬರ್ 5ಕ್ಕೆ ಮೇಯರ್ ಸ್ಥಾನದ ಅವಧಿ ಮುಗಿಯುತ್ತದೆ.ಬಳಿಕ ಮೇಯರ್ ಚುನಾವಣೆ ನಡೆಸಬೇಕೋ ಬೇಡವೋ ಎಂಬುದು ಸರ್ಕಾರಕ್ಕೆ ಬಿಟ್ಟಿದ್ದು. ಸರ್ಕಾರಕ್ಕೆ ನನ್ನನ್ನ ಮೇಯರ್ ಆಗಿ ಮುಂದುವರೆಸುವಂತೆ ಮನವಿ ಮಾಡಲ್ಲ ಎಂದರು.