ಮೈಸೂರು : ಆನ್ಲೈನ್ ಮೂಲಕ ಮತ್ತೊಂದು ರೀತಿಯ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು ವಿದ್ಯುತ್ ಬಿಲ್ ಪಾವತಿಸುವಂತೆ ಮೆಸೇಜ್ ಕಳುಹಿಸಿ ವಂಚನೆ ಮಾಡಿರುವ ಘಟನೆ ನಡೆದಿದೆ.
ಮೈಸೂರಿನ ವ್ಯಕ್ತಿಯೋರ್ವರ ಖಾತೆಯಿಂದ 5.48 ಲಕ್ಷ ರೂಪಾಯಿ ವರ್ಗಾವಣೆಯಾಗಿದೆ.ಕಣ್ಣನ್ (52) ಹಣ ಕಳೆದುಕೊಂಡವರು.ಮೈಸೂರಿನ ಯಾದವಗಿರಿ ಬಡಾವಣೆಯ ನಿವಾಸಿಯಾಗಿರುವ ಕಣ್ಣನ್.
ನಿಮ್ಮ ವಿದ್ಯುತ್ ಬಿಲ್ ಬಾಕಿ ಇದೆ, ಪಾವತಿಸಬೇಕೆಂದು ದೂರವಾಣಿ ಕರೆ ಬಂದಿದೆ.ನಂತರ ಲಿಂಕ್ ಕಳುಹಿಸಿ ಹಣ ಪಾವತಿಸುವಂತೆ ಸೂಚನೆ ನೀಡಿದ್ದಾರೆ. ಲಿಂಕ್ ಮೂಲಕ ಕಣ್ಣನ್ ಅವರ ಸಂಪೂರ್ಣ ಮಾಹಿತಿ ಪಡೆದು ಖಾತೆಯಲ್ಲಿದ್ದ 5,48,149 ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.ಈ ಸಂಬಂಧ ಮೈಸೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ