ಮೈಸೂರು : ಮೈಸೂರು ಜಿಲ್ಲೆಯ ಗಡಿ ಭಾಗದಲ್ಲಿ ಮತ್ತು- ಮಸ್ತಿ ಹೆಚ್ಚಾಗಿದ್ದು ಗಾಂಜಾ ಮತ್ತಿನಲ್ಲಿದ್ದ ಯುವಕ-ಯುವತಿಯರ ರಕ್ಷಣೆ ಮಾಡಿರುವ ಘಟನೆ
ಸರಗೂರು ತಾಲೂಕಿನ ಗೋಳೂರಿನಲ್ಲಿ ನಡೆದಿದೆ.
ರಾಜಾರೋಷವಾಗಿ ಮಾದಕ ವಸ್ತುಗಳ ಅಕ್ರಮ ಮಾರಾಟ ವನ್ನೂ ಗಡಿ ಭಾಗದಲ್ಲಿ ಮಾಡಲಾಗುತ್ತಿದೆ ಇದರಿಂದ ಯುವ ಜನರು ಹಾಲಗುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದು ಒದ್ದಾಡುವ ಯುವತಿಯರು.ಪ್ರಶ್ನಿಸಲು ಹೋದರೆ ಗ್ರಾಮಸ್ಥರ ಮೇಲೆಯೇ ಹಲ್ಲೆಗೆ ಯತ್ನ ಮಾಡಿದ್ದಾರೆ.
ಅಂತರಸಂತೆ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ದಂಧೆ ನಡೆಸುತ್ತಿದ್ದರು ಸ್ಥಳೀಯ ಆಡಳಿತ, ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಯುವ ಜನತೆ ರಕ್ಷಿಸಿ, ಗಾಂಜಾ ಮಾರಾಟ ತಪ್ಪಿಸಿ ಅಂತ ಗ್ರಾಮಸ್ಥರ ಮನವಿ ಮಾಡಿದ್ದಾರೆ.