ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸೆಪ್ಟೆಂಬರ್ 1ಕ್ಕೆ ಗಜ ಪಯಣ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿ ರಾಜೇಂದ್ರ ಹೇಳಿದರು.
ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಲಿರುವ ದಸರಾ ಗಜಪಡೆ
ಅಭಿಮನ್ಯು ನೇತೃತ್ವದ ಮೊದಲ ತಂಡದ ಗಜಪಡೆ ಸೆಪ್ಟೆಂಬರ್ 1ಕ್ಕೆ ಮೈಸೂರಿನತ್ತ
ಗಜಪಯಣ ಸಮಾರಂಭದ ಬಳಿಕ ಮೈಸೂರಿನತ್ತ ಹೊರಡಲಿರುವ ಅಭಿಮನ್ಯು ಅಂಡ್ ಟೀಮ್ ಹೆಜ್ಜೆ
ಲಾರಿಗಳ ಮೂಲಕ ಮೈಸೂರಿಗೆ ಆಗಮಿಸಲಿದೆ ಎಂದು ಹೇಳಿದರು.
ದಸರಾ ಆಚರಣೆ ಕುರಿತು ಈಗಾಗಲೇ ಹೈ ಪವರ್ ಕಮಿಟಿ ಸಭೆ ನಡೆದಿದೆ.ಜಿಲ್ಲಾಡಳಿತವು ಸಹ ದಸರಾ ಆಚರಣೆಗೆ ಸಿದ್ಧತೆ ನಡೆಸಿದೆ.ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ನವರ ನೇತೃತ್ವದಲ್ಲಿ ಮೈಸೂರಿನಲ್ಲಿ ಸಭೆ ನಡೆಯಲಿದೆ.
ಆ ಸಭೆಯಲ್ಲಿ ಸ್ಥಳೀಯ ಶಾಸಕರು,ಜಪ್ರತಿನಿದಿಗಳು ಭಾಗಿಯಾಗಲಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಕೆವಿ ರಾಜೇಂದ್ರ ತಿಳಿಸಿದರು