ಮೈಸೂರು : ಲೋಕಸಭಾ ಚುನಾವಣೆ ಹಿನ್ನಲೆ
ಸಚಿವರನ್ನು ಲೋಕ ಸಭಾ ಚುನಾವಣೆಗೆ ನಿಲ್ಲಿಸುವ ಬಗ್ಗೆ ಯಾವ ಚರ್ಚೆಯು ಆಗಿಲ್ಲ ಇದು ಕೇವಲ ಮಾಧ್ಯಮಗಳಲ್ಲಿ ಸುದ್ದಿಗಳು ಬರುತ್ತಿವೆ ಅಷ್ಟೇ ಎಂದು ಸಚಿವ ಮಹದೇವಪ್ಪ ಹೇಳಿದರು.
ಲೋಕಸಭೆಗೆ ಸಚಿವರು ನಿಲ್ಲುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ, ನಮಗೆ ಅಂತಹ ಯಾವುದೇ ಸೂಚನೆಗಳು ಬಂದಿಲ್ಲಪಕ್ಷದಲ್ಲೂ ಯಾವುದೇ ಚರ್ಚೆ ನಡೆದಿಲ್ಲ
ನಡೆಯದೆ ಇರುವ ಚರ್ಚೆ ನಿಮ್ಮ ಗಮನಕ್ಕೆ ಹೇಗೆ ಬಂತು
ಸಚಿವ ಮಹದೇವಪ್ಪ ಮಾಧ್ಯಮದವರಿಗೆ ಪ್ರಶ್ನೆ ಹಾಕಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸುನೀಲ್ ಬೋಸ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು
ಕಳೆದ ಮೂರು ಬಾರಿಯೂ ಸುನೀಲ್ ಬೋಸ್ ಗೆ ಅವಕಾಶ ಸಿಕ್ಕಿಲ್ಲ. ಆದರೂ ಯಾವುದೇ ಬೇಸರವಿಲ್ಲದೆ ಪಕ್ಷ ಸಂಘಟನೆ ಮಾಡುತ್ತಿದ್ದಾನೆ ಅವಕಾಶ ಸಿಕ್ಕರೆ ಸ್ಪರ್ದೆ ಮಾಡುತ್ತಾನೆ ಈ ವಿಚಾರವಾಗಿ ಇನ್ನೂ ಯಾವುದೇ ತೀರ್ಮಾನ ಪಕ್ಷದಲ್ಲಿ ಆಗಿಲ್ಲ ಎಂದು ಮಹದೇವಪ್ಪ ಸ್ಪಷ್ಟನೆ ನೀಡಿದರು.