ತಿ.ನರಸೀಪುರ : ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ ಜಾರಿ ಬೆನ್ನಲ್ಲೇ ಗ್ರಾಹಕರ ಸೇವಾ ಕೇಂದ್ರಗಳು ತುಂಬಿ ತುಳುಕುತ್ತಿವೆ ಆದಾರ್ ಕಾರ್ಡ್,ರೇಷನ್ ತಿದ್ದುಪಡಿಗೆ ಜನ ಮುಗಿಬಿದ್ದಿದ್ದಾರೆ.
ನರಸೀಪುರ ತಾಲ್ಲೂಕು ಕಚೇರಿಯಲ್ಲಿರುವ ಆಹಾರ ಇಲಾಖೆ ಮುಂಭಾಗ ಜನ ಜಂಗುಳಿ ಹೆಚ್ಚಾಗಿದೆ.
ಸರತಿ ಸಾಲಿನಲ್ಲಿ ನಿಂತು ಪಡಿತರ ಕಾರ್ಡ್ ತೆಗೆದುಕೊಳ್ಳುತ್ತಿರುವ ಜನ.ಪಡಿತರ ಕಾರ್ಡ್ ಗೆ ಮನೆ ಯಜಮಾನಿ ಹೆಸರು ಸೇರಿಸಲು ಆಗಮಿಸುತ್ತಿರುವ ಮಹಿಳೆಯರು.ಸರ್ಕಾರ ಮನೆ ಯಜಮಾನಿಗೆ ಹಣ ನೀಡುತ್ತೇವೆ ಎಂದಿದ್ದಾರೆ.ನಮ್ಮ ಬಳಿ ಹಳೆಯ ಪಡಿತರ ಕಾರ್ಡ್ ಗಳು ಇವೆ.ಜೊತೆಗೆ ಪಡಿತರ ಕಾರ್ಡ್ ರಿನೀವಲ್ ಮಾಡಿಸಲು ಬಂದಿದ್ದೇವೆ ಎನ್ನುತ್ತಿದ್ದಾರೆ ಜನರು.
ಗೃಹಲಕ್ಷ್ಮಿ ಯೋಜನೆಗೆ ರೇಷನ್ ಕಾರ್ಡ್ ಕಡ್ಡಾಯ ಮಾಡಿರುವುದರಿಂದ.ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಬಂದಿದ್ದೇವೆ ಎಂದು ಮಹಿಳೆಯರು ಹೇಳಿದ್ದಾರೆ.