ಹನೂರು : ತಾಲೂಕಿನ ಕಾಡಂಚಿನ ಪೊನ್ನಾಚಿ ಗ್ರಾಮದ ಮೇಗನೂರು ಬಡಾವಣೆಯ ಕಬ್ಬಾಳ ಎಂಬುವವರಿಗೆ ಸೇರಿದ ಸುಮಾರು 6 ಮೇಕೆಗಳನ್ನು ಹಾಗೂ 1 ಎಮ್ಮೆಯ ಕರು ಚಿರತೆ ದಾಳಿಗೆ ಬಲಿಯಾಗಿದೆ, ಕಳೆದ ಮೂರು ನಾಲ್ಕು ದಿನದಿಂದ ಪ್ರತಿದಿನ ದಾಳಿ ಸಾವಿರಾರು ಬೆಲೆ ಬಾಳುವ ಮೇಕೆಗಳನ್ನು ಚಿರತೆ ಕೊಂದು ಹಾಕಿ ಅವುಗಳ ರಕ್ತ ಕುಡಿದಿರುವ ಬಗ್ಗೆ ವರದಿಯಾಗಿದ್ದು, ಜತೆಗೆ ಎಮ್ಮೆಯ ಕರುವನ್ನು ಕೊಂದು ಅದರ ಹೊಟ್ಟೆ ಭಾಗದ ಮಾಂಸ ತಿಂದು ಹಾಕಿದೆ. ಬಡ ಮಹಿಳೆ ಕಬ್ಬಾಳಮ್ಮನಿಗೆ ತನ್ನೆಲ್ಲ ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ.
ಈ ಭಾಗದಲ್ಲಿ ಅತೀ ಹೆಚ್ಚು ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಯಾವುದೇ ಪ್ರಯೋಜನವಿಲ್ಲ. ಈ ಭಾಗದ ಜನರು ಹೆಚ್ಚು ಸಾಕು ಪ್ರಾಣಿಗಳನ್ನು ಅವಲಂಬಿತರಾಗಿದ್ದಾರೆ ಪೊನ್ನಾಚಿ ಗ್ರಾಮದ ಸುತ್ತಮುತ್ತ ಒಂದೆಡೆ ಕಾಡಾನೆ ರೈತರ ಬೆಳೆಗಳನ್ನ ನಾಶ ಮಾಡುತ್ತ ಇರುವುದು ಕಳೆದ ಎರಡು ಮೂರು ವರ್ಷಗಳಿಂದ ನಡೆಯುತ್ತಲೇ ಇದೆ ಇದೀಗ ಚಿರತೆ ದಾಳಿಗೆ ಜಾನುವಾರುಗಳು ಬಲಿಯಾಗುತ್ತಿರುವುದು ರೈತರು ದುರ್ದೈವ.
ಅರಣ್ಯ ಇಲಾಖೆಯವರು ಕೂಡಲೇ ಕಾಡನೆ ಮತ್ತು ಚಿರತೆಯನ್ನು ಹಿಡಿದು ಬೇರೆಡೆ ಸ್ಥಳಾಂತರ ಮಾಡಬೇಕಾಗಿದೆ ಹಾಗೂ ಬಡ ಮಹಿಳೆಗೆ ಪರಿಹಾರ ಕೊಡಿಸಿ ಕೊಡಬೇಕೆಂದು ಕಬ್ಬಾಳಮ್ಮ ಮತ್ತು ಸ್ನೇಹಜೀವಿ ರಾಜ್ ಹಾಗೂ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.