ಮೈಸೂರು: ಭರ್ತಿ ಸನಿಹಕ್ಕೆ ಕೋಟೆ ಕಬಿನಿ ಜಲಾಶಯ ಬಂದಿದ್ದು ಒಳಹರಿವಿನ ಪ್ರಮಾಣದಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ.ಕಪಿಲಾ ನದಿ ಪಾತ್ರದ ಜನರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯ
2284 ಅಡಿ ಗರಿಷ್ಠ ಸಾಮರ್ಥ್ಯವನ್ನೂ ಹೊಂದಿದೆ.
ಸದ್ಯದ ನೀರಿನ ಮಟ್ಟ 2278.31 ಅಡಿಯಿದ್ದು
ಒಳಹರಿವು 20,749 ಕ್ಯೂಸೆಕ್ ಗೆ ಹೆಚ್ಚಳ ಮಾಡಲಾಗಿದೆ.
ಜಲಾಶಯದ ಹೊರ ಹರಿವು 10,000 ಕ್ಯೂಸೆಕ್ ಗೆ ಹೆಚ್ಚಳ.
ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ.ಸದ್ಯ16.09 ಟಿಎಂಸಿ ನೀರು ಸಂಗ್ರಹ.
ಕಬಿನಿ ಜಲಾಶಯದ ಹೊರಹರಿವು ಯಾವುದೇ ಕ್ಷಣದಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಹೀಗಾಗಿ ಕಪಿಲಾ ನದಿಪಾತ್ರದ ಇಕ್ಕೆಲಗಳಲ್ಲಿ ವಾಸಿಸುತ್ತಿರುವ ತಗ್ಗು ಪ್ರದೇಶದ ನಿವಾಸಿಗಳು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.