ಮೈಸೂರು : ರಾಜಕೀಯ ವೈಷಮ್ಯ ಹಿನ್ನಲೆಯಲ್ಲಿ
ಜೆಡಿಎಸ್ ಬೆಂಬಲಿಗರು ಅನ್ನೋ ಕಾರಣಕ್ಕೆ ಕೆಲಸದಿಂದ ತೆಗೆದಿರುವ ಘಟನೆ ತಿ.ನರಸೀಪುರದಲ್ಲಿ ನಡೆದಿದೆ.
ಶಿವಕುಮಾರ್ ನವೀದ್ ಪಾಷಾ ಕೆಲಸ ಕಳೆದುಕೊಂಡವರು.

ನೀರಾವರಿ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಆಪರೇಟರ್‌ಗಳಾಗಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ನವೀದ್ ಪಾಷಾ ಜೆಡಿಎಸ್ ಬೆಂಬಲಿಗ ಅನ್ನೋ ಕಾರಣಕ್ಕೆ ಕೆಲಸದಿಂದ ಕೊಕ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕಳೆದುಕೊಂಡವರಿಗೆ ನೀರಾವರಿ ಇಲಾಖೆ ಇಂಜಿನಿಯರ್ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ. ಕೆಲ್ಸ ಕಳೆದುಕೊಂಡವರ ಹಾಗೂ ಸೋಮಣ್ಣ ನಡುವಿನ ಆಡಿಯೋ ಈಗ ವೈರಲ್ ಆಗಿದೆ.ಹೊಸ ಗುತ್ತಿಗೆ ಕೆಲಸ ಏನು ನನಗೆ ಕೇಳಬೇಡಿ
ಕೆಲಸ ಮಾಡಿದರು ಹಣ ಸುನೀಲ್ ಬೋಸ್ ಹೇಳಿದರೆ ಮಾತ್ರ ಕೊಡುವುದುಇದಕ್ಕೆ ದೂರವಾಣಿ ಮೂಲಕ ಕೆಲಸ ಕಳೆದುಕೊಂಡ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವ ಪಕ್ಷದ ಪರ ಕೆಲಸ ಮಾಡಿಲ್ಲ
ನಾನು 8 ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ
ಏಕಾ ಏಕಿ ಕೆಲಸದಿಂದ ತೆಗೆದರೆ ಹೇಗೆ ಅಂತಾ ಪ್ರಶ್ನೆ ಮಾಡಿದ್ದಾರೆ ಇದಕ್ಕೆ ಉತ್ತರಿಸಿದ ಇಂಜಿನಿಯರ್ ಸಮಜಾಯಿಸಿ ನೀಡಿ 8 ವರ್ಷ ಆದರೂ ಸರಿ 10 ವರ್ಷದಿಂದ ಕೆಲಸ ಮಾಡಿದ್ದರು ಸರಿ
ಶಾಶ್ವತ ಇರುವವರನ್ನೇ ತೆಗೆಯುತ್ತಾರೆ
ಯಾರು ಆಡಳಿತದಲ್ಲಿ ಇರುತ್ತಾರೆ ಅವರ ಮಾತು ಕೇಳಬೇಕು ನಿಮ್ಮ ಸಂಸದರು ಹೇಳಿದರು ಆಗುವುದಿಲ್ಲ
ನೀವು ಏನಾದರೂ ಮಾಡಿಕೊಳ್ಳಿ ನಮಗೆ ಗೊತ್ತಿಲ್ಲ ಎಂದು
ಇಂಜಿನಿಯರ್ ಸೋಮಣ್ಣ ಹೇಳಿದ್ದಾರೆ