ಮೈಸೂರು : ಮೂಡ ಚೆರ್ಮನ್ ಹುದ್ದೆಯ ಮೇಲೆ ಮೈಸೂರು ಕೈ ಮುಖಂಡರ ಕಣ್ಣುಗಳು ಜೋರಾಗಿದ್ದು
ನಿಗಮ ಮಂಡಳಿ, ಸ್ಥಾಯಿ ಸಮಿತಿ ಅಧ್ಯಕ್ಷರ ಹುದ್ದೆಗೆ ಬರೋಬ್ಬರಿ 250 ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಹೇಳಿದರು.
ಪ್ರಸ್ತುತ ಅವಧಿಯಲ್ಲಿ 18 ತಿಂಗಳ ಅಧಿಕಾರದ ಅವಕಾಶ.
ಯಾರೇ ಯಾವುದೇ ಸ್ಥಾನ ಪಡೆದರು 18 ತಿಂಗಳು ಮಾತ್ರ ಅಧಿಕಾರದವಧಿ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಆರ್ ಮೂರ್ತಿ ಸ್ಪಷ್ಟನೆ ನೀಡಿದರು. ಅರ್ಜಿ ಸಲ್ಲಿಸಿರುವ ಬಹುತೇಕರಿಂದ ಮೂಡ ಚೆರ್ಮನ್ ಹುದ್ದೆ ಮೇಲೆ ಆಸಕ್ತಿ ಇದೆ.ಜಿಲ್ಲೆಯಾದ್ಯಂತ 250 ಅರ್ಜಿಗಳು ಸಲ್ಲಿಕೆಯಾಗಿದೆ.
ಸದ್ಯ ಎಲ್ಲಾ ಅರ್ಜಿಗಳನ್ನು ಕೆಪಿಸಿಸಿಗೆ ರವಾನಿಸಿದ್ದೇವೆ.
ಪಕ್ಷಕ್ಕೆ ದುಡಿದಿರುವ ಎಲ್ಲಾ ಮುಖಂಡರು, ಕಾರ್ಯಕರ್ತರಿಗೂ ಅಧಿಕಾರ ಸಿಗಲಿದೆ.ಮೂಡ, ಪಾಲಿಕೆಗೆ ತಲಾ 5 ಮಂದಿ ಸದಸ್ಯರ ಆಯ್ಕೆ ಮಾಡುತ್ತಾರೆ ಎಂದರು.
ಚಲುವಾಂಬ ಆಸ್ಪತ್ರೆ ಸಮಿತಿ, ಆಶ್ರಯ ಸಮಿತಿ, ಪ್ರಾಧಿಕಾರಗಳು, ಸೇರಿದಂತೆ ಹಲವಾರು ಹುದ್ದೆಗಳಿಗೆ ನೇಮಕ ಮಾಡಲಾಗುವುದು.ವಿಧಾನಸಭೆ ಅಧಿವೇಶನ ಮುಕ್ತಾಯದ ಬಳಿಕ ಕೆಪಿಸಿಸಿ ವರಿಷ್ಠರು ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದರು.