ಮೈಸೂರು : ಕಾವೇರಿ ನದಿ ನೋಡಲು ಹೋದ ಬಾಲಕಿ
ಕಾಲು ಜಾರಿ ನದಿಗೆ ಬಿದ್ದು ಸಾವನ್ನಪಿರುವ ಘಟನೆ ನಡೆದಿದೆ.
ಕೆ.ಆರ್.ನಗರ ತಾಲೂಕಿನ ಕಪ್ಪಡಿ ಕ್ಷೇತ್ರದ ಬಳಿ ಈ ಘಟನೆ ನಡೆದಿದ್ದು ಗಂಧನಹಳ್ಳಿ ಗ್ರಾಮದ ಲೋಕೇಶ್ ಎಂಬುವರ ಪುತ್ರಿ ಸ್ಪೂರ್ತಿ (೧೩) ಮೃತ ವಿದ್ಯಾರ್ಥಿನಿ.ಬಾಲಕಿಯ ಶವಕ್ಕಾಗಿ ಅಗ್ನಿಶಮಕ ದಳದಿಂದ ಶೋಧ ಕಾರ್ಯ ಮುಂದುವರೆದಿದೆ.
ವಾರದ ರಜೆ ಹಿನ್ನೆಲೆ ತಂದೆ ತಾಯಿ ಜತೆ ಪ್ರವಾಸಕ್ಕೆ ಬಂದಿದ್ದ ಬಾಲಕಿ ಊಟದ ಬಳಿಕ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದು ಸಾವೀಗಿದಾಗಿದ್ದಾಳೆ
ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.