ಮೈಸೂರು : ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಸೌಜನ್ಯ ಪ್ರಕರಣದಲ್ಲಿ ನೊಂದವರಿಗೆ ನ್ಯಾಯ ನೀಡಿವಂತೆ ಆಗ್ರಹಿಸಿ ಬರೋಬ್ಬರಿ11 ವರ್ಷದ ಬಳಿಕವೂ ಹೋರಾಟ ನಡೆಯುತ್ತಿದ್ದು ಶಾಲಾ- ಕಾಲೇಜು ವಿದ್ಯಾರ್ಥಿನಿಯರು,ಪ್ರಗತಿಪರ ಚಿಂತಕರು,ದಲಿತ ಸಂಘಟನೆಗಳು,ರೈತ ಹೋರಾಟಗಾರರು, ಮಹಿಳೆಯರು ಭಾಗಿಯಾಗಿದ್ದಾರೆ.
ಸೌಜನ್ಯ ಸಾವಿನ ಹಿಂದಿನ ಸತ್ಯ ಬಹಿರಂಗವಾಗಲಿ.
ತನಿಖೆಯ ದಿಕ್ಕು ತಪ್ಪಿಸಿದವರಿಗೆ ಶಿಕ್ಷೆಯಾಗಲಿ ಎಂದು
ಮೈಸೂರಿನ ಬೀದಿ ಬೀದಿಗಳಲ್ಲಿ ಪಾದಯಾತ್ರೆ ಮಾಡಿದರು
ನಂಜರಾಜ ಬಹದ್ದೂರು ಛತ್ರದ ಆವರಣದಿಂದ ಆರಂಭವಾದ ಪ್ರತಿಭಟನೆ ಟೌನ್ ಹಾಲ್ ವರಗೆ ಸಾಗಿತು.
ದಾರಿಯುದ್ಧಕ್ಕೂ ಸೌಜನ್ಯ ಪರ ಜೈಕಾರದ ಘೋಷಣೆ ಕೂಗಿ ಅನ್ಯಾಯಕ್ಕೆ ಒಳಗಾದ ಕುಟುಂಬಕ್ಕೆ ನ್ಯಾಯ ನೀಡುವಂತೆ ಕುಟುಂಬಸ್ಥರು ಆಗ್ರಹಿಸಿದರು.