ಮೈಸೂರು : ಕೊಳವೆ ಬಾವಿ ಮಣ್ಣು ಕುಸಿತ ಉಂಟಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿ ಇಬ್ಬರಿಗೆ ಗಾಯವಗಿರುವ ಘಟನೆ ತಿ.ನರಸೀಪುರ ತಾಲೂಕಿನ ಸುಜ್ಜುಲೂರು ಗ್ರಾಮದಲ್ಲಿ ನಡೆದಿದೆ.ಮಹೇಶ್ 34 ಮಣ್ಣು ಕುಸಿದು ಸಾವಿಗೀಡಾಗಿರುವ ದುರ್ದೈವಿ.

ನಿಂಗಪ್ಪ,ಮಾಧುಗೆ ಎಂಬುವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಿಂಗಪ್ಪ ಅವರ ಜಮೀನಿನಲ್ಲಿ ಕೆಲಸ ಮಾಡುವಾಗ ಈ ಅವಘಡ ಸಂಭವಿಸಿದೆ.
ಕೇಸಿಂಗ್ ಪೈಪ್ ಶಿಥಿಲಗೊಂಡಿದ್ದ ಹಿನ್ನೆಲೆ
ಹೊಸ ಕೇಸಿಂಗ್ ಪೈಪ್ ಅಳವಡಿಸುವ ವೇಳೆ ಘಟನೆ ನಡೆದಿದ್ದು ಟಿ ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.