ಮೈಸೂರು : ಪಂಚಮಸಾಲಿ ಲಿಂಗಾಯತ ಗೌಡ ಒಳಗೊಂಡಂತೆ ಎಲ್ಲಾ ಲಿಂಗಾಯತ ಒಳ ಪಂಗಡಗಳನ್ನು ಕೇಂದ್ರದ ಒಬಿಸಿ ಮೀಸಲಾತಿ ಶಿಪಾರಸ್ಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯ ಮಾಡಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2ಎ ಮೀಸಲಾತಿಗಾಗಿ ಕಳೆದ ಮೂರು ವರ್ಷಗಳಿಂದ ನಾವು ಹೋರಾಟ ಮಾಡಿದ್ದೀವಿ
ನಮ್ಮ ಹೋರಾಟದ ಪರಿಣಾಮ ಹಿಂದಿನ ಸರ್ಕಾರ 2ಡಿ ಮೀಸಲಾತಿಯನ್ನು ಕೊಟ್ಟಿತ್ತು
2ಎ ಮೀಸಲಾತಿಗೆ ತಡೆಯಾಜ್ಞೆ ಇದ್ದಿದ್ರಿಂದ 2ಡಿ ಮೀಸಲಾತಿ ಕೊಟ್ಟಿದ್ರು
ಈಗ 2ಡಿ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ
ನಮ್ಮ ಸಮಾಜದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಹಾಗೂ ನೇಮಕಾತಿಯಲ್ಲಿ ಅವಕಾಶ ವಂಚಿತರಾಗಿದ್ದಾರೆ
ಈ ಕುರಿತು ಸಿಎಂ ಸಿದ್ದರಾಮಯ್ಯ ಬಳಿ ನಮ್ಮ ಶಾಸಕರ ನಿಯೋಗ ಬೇಟಿಯಾಗಿ ನ್ಯಾಯ ದೊರಕಿಸಿ ಕೊಡಿ ಎಂದು ಕೇಳಿದ್ದೇವೆ
ಅಧಿವೇಶನ ಮುಗಿದ ಮೇಲೆ ಕಾನೂನು ತಜ್ಞರ ಸಭೆ ಕರೆದು ಸರ್ಕಾರದ ನಿಲುವನ್ನು ತಿಳಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ
ಆದಷ್ಟು ಬೇಗ ಮೀಸಲಾತಿ ವಿಚಾರಕ್ಕೆ ಸಂಭoಧಿಸಿ ಸಭೆ ಕರೆದು ಕಾನೂನು ಅಡೆತಡೆ ನಿವಾರಿಸಬೇಕು
ಅಲ್ಲದೆ ನಮ್ಮ ಲಿಂಗಾಯತ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದರು.