ಮೈಸೂರು : ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹ ಹಿನ್ನೆಲೆ ಮೈಸೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮೌನ ಪ್ರತಿಭಟನಾ ಧರಣಿ ನಡೆಸಲಾಯಿತು.
ನಗರದ ಗಾಂಧಿ ವೃತ್ತದ ಬಳಿ ಬೆಳಗ್ಗೆಯಿಂದ ಸಂಜೆವರಗೆ ಕೇಂದ್ರ ಸರ್ಕಾರದ ವಿರುದ್ಧ ಮೌನ ಪ್ರತಿಭಟನಾ ಹಮ್ಮಿಕೊಂಡಿದೆ.ಮೋದಿಯವರ ಏಕಚಕ್ರಾಧಿಪತ್ಯದ ಹಿಟ್ಲರ್ ಮಾದರಿಯ ವ್ಯವಸ್ಥೆ ಟೀಕಿಸಿದ್ದನ್ನೇ ಗುರಿಯಾಗಿಟ್ಟುಕೊಂಡು ಎಂಪಿ ಸ್ಥಾನದಿಂದ ಅನರ್ಹಗೊಳಿಸಿರುವುದನ್ನ ದೇಶ,ಜಗತ್ತು ತೀವ್ರವಾಗಿ ಖಂಡಿಸುತ್ತದೆ.ರಾಹುಲ್ ಗಾಂಧಿ ಒಂಟಿಯಲ್ಲ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದಿದ್ದಾರೆ.
ಸತ್ಯ ಮತ್ತು ನ್ಯಾಯವನ್ನೇ ಅನರ್ಹಗೊಳಿಸಿದ ಪ್ರಧಾನಿ,
ಸರ್ವಾಧಿಕಾರಿ ಧೋರಣೆಯ ಮೋದಿಗೆ ಧಿಕ್ಕಾರ, ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಭಿತ್ತಿ ಪತ್ರ ಹಿಡಿದು, ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ ವಿಜಯಕುಮಾರ್, ಮಾಜಿ ಶಾಸಕರಾದ ಸೋಮಶೇಖರ್, ವಾಸು ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ಪ್ರತಿಭಟನಾ ಧರಣಿ.
ಧರಣಿಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿ.