ತಿ.ನರಸೀಪುರ : ಹಿಂದೂ ಕಾರ್ಯಕರ್ತರು ಒಬ್ಬೊಬ್ಬರೆ ಓಡಾಡಬೇಡಿ ಎಂದು ವೇಣುಗೋಪಾಲ್ ಕುಟುಂಬಸ್ಥರ ಭೇಟಿ ಬಳಿಕ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ಈ ಸರ್ಕಾರ ಇರುವವರೆಗೆ ಎಲ್ಲರನ್ನು ಕೊಲ್ಲುತ್ತಾರೆ.
ಎಲ್ಲರನ್ನು ಮುಗಿಸುವ ಪ್ರಯತ್ನವನ್ನ ಮಾಡಿದ್ದಾರೆ.
ಈ ಸರ್ಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ.
ಮೋಸ ವಂಚನಿಯಿಂದ ಕೊಲ್ಲುತ್ತಾರೆ.
ಈ ಸರ್ಕಾರ ಅಧಿಕಾರ ಬಂದ ನಂತರ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ.
ಇಲ್ಲಿ ಧರ್ಮದ ವಿಚಾರವಾಗಿ ನಡೆದಿರುವ ಕೊಲೆ ಇದು.
ಧರ್ಮ ಅಂತ ಬಂದಾಗ ನಾವೆಲ್ಲ ಒಂದೆ.
ಇದರಲ್ಲಿ ಯಾವುದೇ ಪಕ್ಷ ಅನ್ನುವುದು ಇಲ್ಲ ಎಂದರು.
ಕೊಲೆಯ ಬಗ್ಗೆ ಸಂಪೂರ್ಣ ತನಿಖೆ ನಡೆದರೆ ಯಾರ ಕುಮ್ಮಕ್ಕಿನಿಂದ ಆಗಿರುವುದು ಎಂಬುದು ಗೊತ್ತಾಗುತ್ತೆ.
ವೇಣುಗೋಪಾಲ್ ಪೋನ್ ಪರಿಶೀಲನೆ ಮಾಡಿದ್ರೆ ಯಾರೆಲ್ಲ ಪೋನ್ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ.
ವೇಣುಗೋಪಾಲ್ ಹಿಂದೂ ಸಂಘಟನೆಯಲ್ಲಿ ಕೆಲಸ ಮಾಡಿದ.
ಹನುಮ ಜಯಂತಿ ಮಾಡಿದ್ದಾನೆ ವೇಣುಗೋಪಾಲ್ ಯಾವುದೇ ಕ್ರಿಮಿನಲ್ ಕೆಲಸ ಮಾಡಿಲ್ಲ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.
ಕಾಂಗ್ರೆಸ್ ಸರ್ಕಾರ ಬಂದ ನಂತರ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು
ಕಾಂಗ್ರೆಸ್ ವಿರುದ್ಧ ಟಿ.ನರಸೀಪುರದಲ್ಲಿ ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ಮಾಡಿದ್ದಾರೆ.