ಮೈಸೂರು : ವೇಣು ಗೋಪಾಲ್ ಹತ್ಯೆಯ ಆರೋಪಿಗಳು ಮೂರು ತಿಂಗಳಿಗೆ ಹೊರಗೆ ಬಂದ್ರೆ ಕತ್ತು ಕೊಯ್ದುಕೊಂಡು ಸಾಯುವೆ ಎಂದು ಮೃತ ಯುವ ಬಿಗ್ರೆಡ್ ಕಾರ್ಯಕರ್ತ
ವೇಣುಗೋಪಾಲ್ ಹೆಂಡತಿ ಪೂರ್ಣಿಮಾ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಸುನೀಲ್ ಬೊಸ್ ಮುಂದೆ ಮೃತ ವೇಣುಗೋಪಾಲ್ ಪತ್ನಿ ಅಳಲು ತೋಡಿಕೊಂಡು
ನಾನು ಕುರುಬ ಸಮುದಾಯಕ್ಕೆ ಸೇರಿದವಳು.
ನನ್ನ ಗಂಡ ನಾಯಕ ಸಮುದಾಯಕ್ಕೆ ಸೇರಿದವನು.
ಇಬ್ಬರು ಪ್ರೀತಿಸಿ ಮದುವೆ ಆಗಿದ್ದು.7 ವರ್ಷ ಜೀವನ ಸಾಗಿಸಿದ್ದೇನೆ.ಈಗ ನನಗೆ ಯಾರು ಗತಿ ಎಂದು ಕಣ್ಣೀರು ಹಾಕಿದರು.
ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು.ಮೂರೇ ತಿಂಗಳಿಗೆ ಆರೋಪಿಗಳು ಹೊರಗೆ ಬಂದ್ರೆ ನಾನು ಮತ್ತು ಮಗಳು ಕತ್ತು ಕೊಯ್ದುಕೊಂಡು ಸಾಯುತ್ತೇನೆ
ಹನುಮ ಜಯಂತಿ ನಡೆದ ವೃತ್ತದ್ದಲ್ಲೇ ನಮ್ಮ ಸಾವು ಖಚಿತ ಎಂದು ಸುನೀಲ್ ಬೋಸ್ ಮುಂದೆ ಎಚ್ಚರಿಕೆ ಕೊಟ್ಟಿದ್ದಾರೆ
ಹಿಂದೂಗಳನ್ನೇ ಮುಗಿಸುತ್ತಿದ್ದಾರಲ್ಲ ಸರ್ ಎಂದು ಪೂರ್ಣಿಮಾ ಹೇಳುತ್ತಿದ್ದಂತೆ ಯಾರದ್ದೇ ಆದರೂ ಪ್ರಾಣ ಒಂದೇ ಎಂದು ಹೇಳಿ ಸಾಂತ್ವಾನ ಹೇಳಿ ಹೊರ ಬಂದ ಸುನೀಲ್ ಬೋಸ್ ಹೊರ ಬಂದಿದ್ದಾರೆ.