ಮೈಸೂರು : ಹಿಂದೂ ಕಾರ್ಯಕರ್ತ ವೇಣು ಗೋಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಕ್ರವರ್ತಿ ಸೂಲಿಬೆಲೆಗೆ ಮಹದೇವಪ್ಪ ಪುತ್ರ ಸುನೀಲ್ ಬೋಸ್ ತೀಕ್ಷ್ಣ ತಿರುಗೇಟು ಕೊಟ್ಟಿದ್ದಾರೆ.
ಚಕ್ರವರ್ತಿ ಸೂಲಿಬೆಲೆಗೆ ತಲೆ ಸರಿ ಇಲ್ಲ.ಅವರಿಗೆ ಮೊದಲು ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯ ಇದೆ.
ಸುಳ್ಳಿನಿಂದಲೆ ಜೀವನ ಕಟ್ಟಿಕೊಂಡಿರುವ ವ್ಯಕ್ತಿ ಅವರು.
ಈ ಕೊಲೆ ಪ್ರಕರಣದಲ್ಲು ಸುಳ್ಳು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ.ಕೊಲೆ ವಿಚಾರದಲ್ಲಿ ಸೂಲಿಬೆಲೆಗೆ ಪ್ರಾಥಮಿಕ ಮಾಹಿತಿ ಇಲ್ಲ.ಸತ್ತಿರುವ ಯುವಕ ನಾಯಕ ಸಮುದಾಯದ ವ್ಯಕ್ತಿ.ಆದರೆ ಸುಲಿಬೆಲೆ ಅವರನ್ನ ದಲಿತ ಸಮುದಾಯ ಎಂದು ಸುಳ್ಳು ಹೇಳುತ್ತಾರೆ.
ಸುಲಿಬೆಲಿಗೆ ಮೊದಲು ಚಿಕಿತ್ಸೆ ಅಗತ್ಯವಿದೆ ಎಂದಿದ್ದಾರೆ
ವೈಯಕ್ತಿಕ ವಿಚಾರಕ್ಕೆ ಮಾಡುವ ಕೊಲೆಗೆ ಒಬ್ಬ ವ್ಯಕ್ತಿ ಅಥವ ಪಕ್ಷ ಹೇಗೆ ಹೊಣೆಗಾರರಾಗುತ್ತಾರೆ.
ವೈಯಕ್ತಿಕ ಗಲಭೆಗಳು ,ಕೃತ್ಯಗಳಿಗೆ ನಾವು ಹೊಣೆಗಾರರಾಗಲು ಸಾಧ್ಯವಿಲ್ಲ.
ಬಿಜೆಪಿ ಕಾರ್ಯಕರ್ತನೊಬ್ಬ ಈ ರೀತಿ ಘಟನೆಯಲ್ಲಿ ಭಾಗಿಯಾದ್ರೆ ಅದರ ಹೊಣೆಯನ್ನ ಬಿಜೆಪಿ ಹೊರುತ್ತದ?
ಇಂತಹ ಸಾವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ.
ಪಕ್ಷದ ಅನೇಕ ಕಾರ್ಯಕರ್ತರು ನಮ್ಮ ಜೊತೆ ಪೋಟೊ ತೆಗೆಸಿಕೊಂಡಿರುತ್ತಾರೆ.ನಾನು ಈ ಭಾಗದ ಮುಖಂಡ
ಅವರು ಮಾಡುವ ವೈಯಕ್ತಿಕ ತಪ್ಪಿಗೆ ನಾವೇಗೆ ಪ್ರೇರಣೆಯಾಗುತ್ತೇವೆ ಎಂದು ಪ್ರಶ್ನಿಸಿದರು.
ಪ್ರಕರಣದ A4 ಆರೋಪಿ ಬಿಜೆಪಿ ಪಾಲಿಕೆ ಸದಸ್ಯೆಯ ತಮ್ಮ.ಇದನ್ನು ನೋಡಿ ಬಿಜೆಪಿಯವರೆ ಹೇಳಿಕೊಟ್ಟಿದ್ದಾರೆ ಎಂದು ನಾನು ಪ್ರಶ್ನಿಸಿದರೆ ಅದು ಹೇಗಿರುತ್ತದೆ ಹೇಳಿ.
ಟಿ.ನರಸೀಪುರದಲ್ಲಿ ಬಲಾಡ್ಯ ಇಲ್ಲ ನೀನು ಕೊಲೆ ಮಾಡು ನಾವು ರಾಜಕಾರಣ ಮಾಡುತ್ತೇವೆ ಎಂದು ಆತನಿಗೆ ಹೇಳಿಕೊಟ್ಟಿದ್ರಾ ಎಂದು ನಾನು ಪ್ರಶ್ನಿಸುತ್ತೇನೆ.
ಈ ಪ್ರಶ್ನೆಗೆ ಅವರು ಉತ್ತರಿಸಲು ಸಾಧ್ಯನಾ
ಸಾವಿನಲ್ಲಿ ರಾಜಕಾರಣ ಯಾರು ಮಾಡಬಾರದು ಎಂದರು.
ಬಿಜೆಪಿಯವರು ಶವದ ಮೇಲೆ ರಾಜಕಾರಣ ಮಾಡಲು ಹೊರಟ್ಟಿದ್ದಾರೆ.ಬಿಜೆಪಿಗೆ ಸದಾ ಕಾಲ ಇಂತ ಕೊಲೆ ಗಲಭೆಗಳ ಬಗ್ಗೆ ಆಸಕ್ತಿ.ನಾನು ಈ ಕೊಲೆಯನ್ನ ನಾನು ಖಂಡಿಸುತ್ತೇನೆ.ಸರಿಯಾದ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ನಮ್ಮ ತಂದೆ ಸೂಚನೆ ನೀಡಿದ್ದಾರೆ ಎಂದು ಸುನೀಲ್ ಬೋಸ್ ತಿಳಿಸಿದರು.