ಮೈಸೂರು : ಬಿಜೆಪಿ ಸರ್ಕಾರದ ಹಗರಣಗಳ ತನಿಖೆ ವಿಚಾರಕ್ಕೇ ಸಂಸದ ಪ್ರತಾಪ್ ಸಿಂಹ ಉತ್ತರ ನೀಡಿದ್ದಾರೆ.
ಅರ್ಕಾವತಿ ಹಗರಣ,ಡಿ ನೋಟಿಫಿಕೇಶನ್,ಕೆಂಪಣ್ಣ ಆಯೋಗದ ವರದಿ ತನಿಖೆಯನ್ನ ನಮ್ಮ ಸರ್ಕಾರ ಇದ್ದಾಗಲೂ ಮಾಡ್ಲಿಲ್ಲ ನೀವು ಮಾಡ್ಲಿಲ್ಲ.
ನೀವು ವಿರೋಧ ಪಕ್ಷದಲ್ಲಿದ್ದಾಗ ನಮ್ಮವರು ನಿಮ್ಮನ್ನ ಈ ವಿಚಾರ ಮುಂದಿಟ್ಟುಕೊಂಡು ಹೆದರಿಸುವುದು.
ನೀವು ಅಧಿಕಾರಕ್ಕೆ ಬಂದಾಕ್ಷಣ ನಮ್ಮವರನ್ನ ನೀವು ಹೆದರಿಸ್ತೀರಾ.ಅಂದ್ರೆ ನೀವೆಲ್ಲ ಸೀನಿಯರ್ಸ್ ನಾಯಕರು ಅಡ್ಜಸ್ಟ್ ಮೆಂಟ್ ನಲ್ಲಿ ಇದ್ದೀರಾ
ತನಿಖೆಗೆ ಆದೇಶ ಮಾಡಿ ಎಂದು ಸಿದ್ದರಾಮಯ್ಯ ಅವರನ್ನು ಒತ್ತಾಯ ಮಾಡಿದ್ದಾರೆ.
ನೀವು ಹೇಳಿದ್ರಲ್ಲ 40%ಅಂತ ಅದನ್ನ ಪ್ರೂವ್ ಮಾಡಿ.
ಬಿಟ್ ಕಾಯಿನ್ ನ ಸಾವಿರಾರು ಕೋಟಿ ಹಗರಣವನ್ನ ಪ್ರೂವ್ ಮಾಡಿ.ಪಿಎಸ್ ಐ ಹಗರಣದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ.ಬಿಜೆಪಿಯವರು ಭಾಗಿಯಾಗಿದ್ರು ಹಿಡಿದು ತಂದು ಶಿಕ್ಷೆ ಕೊಡಿ.
ನಾನು ಅವತ್ತೇ ಹೇಳಿದ್ದೇನೆ ತನಿಖೆ ಮಾಡಿ ಶಿಕ್ಷೆ ಕೊಡಿಸಿದ್ರೆ.
ನಿಮ್ಮ ಕಾಲಿಗೆ ಬಿದ್ದು ಪಾದಪೂಜೆ ಮಾಡುತ್ತೇನೆ
ಸಂಸದ ಪ್ರತಾಪ್ ಸಿಂಹ ಹೇಳಿದರು.