ಮೈಸೂರು : ಕಾಂಗ್ರೆಸ್ ಗ್ಯಾರಂಟಿ ಟಿಕೀಸುವವರು ಮನುವಾದಿಗಳು ಎಂಬ ಸಚಿವ ಮಹದೇವಪ್ಪ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.
ಗ್ಯಾರಂಟಿ ಯೋಜನೆಗೆ ಎಲ್ಲಿಂದ ದುಡ್ಡು ತರ್ತೀರಿ.
ಜನರ ಮೇಲೆ ಹೊರೆ ಜಾಸ್ತಿ ಆಗ್ತಿದೆ ಎಂದರೆ ಮನುವಾದಿಗಳು ಎನ್ನುತ್ತಿರಿ.
ಇದು ಕಾಂಗ್ರೆಸ್ಸಿನ ಒಂದು ರೂಡಿಗತವಾದಂತ ಪ್ರವೃತ್ತಿ.
ಸಿದ್ದರಾಮಯ್ಯ,ಡಿಕೆಶಿ,ಸಂಪುಟ ಸಚಿವರು ಎಲ್ಲರನ್ನು ಕೇಳುತ್ತೇನೆ.
ಕರೆಂಟ್ ಬಿಲ್ಲನ್ನ ಯದ್ವಾ ತದ್ವ ಜಾಸ್ತಿ ಮಾಡಿದ್ದೀರಿ.
ಇದನ್ನ ಬಿಜೆಪಿ ಸರ್ಕಾರ ಮಾಡಿದ್ದು ಎಂದು ಟಿಕೀಸುತ್ತಿರಿ.
ನಾವು ಹಿಂದೆ ಮತಾಂತರ,ಗೋಹತ್ಯೆ,ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದೇವೆ.
ಇವೆಲ್ಲವನ್ನು ಬದಲಾಯಿಸ್ತೀನಿ ಎಂದಿದ್ದೀರಿ.
ಅದೇ ರೀತಿ ಕರ್ನಾಟಕ ಎಲೆಕ್ರಿಸಿಟಿ ರೆಗ್ಯುಲೇಟರಿ ಕಮಿಷನ್ ನವರು ತೆಗೆದುಕೊಂಡಿರುವ ನಿರ್ಧಾರವನ್ನ ಬಿಜೆಪಿ ತಲೆಗೆ ಕಟ್ಟಿದ್ದೀರಿ.
ಈಗ ನಿಮ್ಮದೇ ಸರ್ಕಾರವಿದೆ ಆಗಾಗಿ ವಿದ್ಯುತ್ ದರ ಏರಿಕೆಯನ್ನ ಸಹ ಬದಲಾಯಿಸಿ.
ಈಗಾಗಲೇ ಎಲ್ಲ ಟೆಂಡರ್ ಗಳನ್ನ ತಡೆ ಹಿಡಿದಿದ್ದೀರಿ.
ಇದರ ಅರ್ಥ ಗುತ್ತಿಗೆದಾರರು ಬಂದು ಕಮಿಷನ್ ಮಾತನಾಡಲಿ ಎಂದರ್ಥವೇ? ಎಂದು ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯನವರೇ ಎಷ್ಟೇ ಕಷ್ಟ ಆದ್ರೂ ಗ್ಯಾರಂಟಿ ಕೊಡುತ್ತೇವೆ ಎಂದು ಹೇಳಿದ್ರಿ
ನಿಮ್ಮ ಆಸ್ತಿ,ಡಿಕೆಶಿ ಆಸ್ತಿ,ಕೆಜೆ ಜಾರ್ಜ್,ಎಂ ಬಿ ಪಾಟೀಲ್ ನೀವೆಲ್ಲ ಗಳಿಸಿರುವ ಆಸ್ತಿಯನ್ನ ಮಾರಿ ಜನಕ್ಕೆ ಕೊಡ್ತೀರಾ
ಒಂದಷ್ಟು ಜನರ ಬಳಿ ದೋಚಿ ಇನ್ನೊಂದಷ್ಟು ಜನರಿಗೆ ಕೊಡ್ತೀರಾ.
ಕೆಸಿ ರೆಡ್ಡಿ ಮತ್ತು ಕೆಂಗಲ್ ಹನುಮಂತಯ್ಯ ಕಾಲದಿಂದ ಹಿಡಿದು.
ಬಸವರಾಜ್ ಬೊಮ್ಮಾಯಿಯವರ ಕಾಲದ ತನಕ ಮಾಡಿರುವ ಸಾಲದ ಬಗ್ಗೆ ಶ್ವೇತ ಪತ್ರ ಹೊರಡಿಸಲಿನೀವೇ ಹೇಳಿರುವ ಪ್ರಕಾರ ಗ್ಯಾರಂಟಿ ಯೋಜನೆಗೆ 59ಸಾವಿರ ಕೋಟಿ ಬೇಕಾಗುತ್ತೆ.
ಇನ್ನು 5ವರ್ಷಕ್ಕೆ 3ಲಕ್ಷ ಕೋಟಿ ರಾಜ್ಯಕ್ಕೆ ಸಾಲ ಆಗುತ್ತೆ.
ಈಗೇನೋ ನಾಮಕವಸ್ತೆಗೆ ಉಚಿತ ಗ್ಯಾರಂಟಿ ಅಂತೀರಾ.
ಆದರೆ ಮುಂದಿನ ಅವರ ಮಕ್ಕಳ ಭವಿಷ್ಯ ಏನು?
13ಬಾರಿ ಬಜೆಟ್ ಮಂಡನೆ ಮಾಡಿರುವ ನೀವು ಈ ಯೋಜನೆಗೆ ಹಣ ಎಲ್ಲಿಂದ ತರ್ತೀರಾ ಹೇಳಿ ಎಂದು
ರಾಜ್ಯ ಸರ್ಕಾರಕ್ಕೆ ಸಂಸದ ಪ್ರತಾಪ್ ಸವಾಲು ಹಾಕಿದರು.