ಮೈಸೂರು : 2024ಕ್ಕೆ ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ಕೊಟ್ಟಿದ್ದಾರೆ.
ಜನ ನಿಮ್ಮ ಮುಖ ನೋಡಿ ಯಾರು ವೋಟ್ ಹಾಕಿಲ್ಲ
ಗ್ಯಾರಂಟಿ ಸ್ಕೀಮ್ ಗಳನ್ನ ನೋಡಿ ವೋಟ್ ಹಾಕಿದ್ದಾರೆ.
ಮೋದಿಯವರ ಬಗ್ಗೆ ಮಾತನಾಡುವುದನ್ನ ಬಿಡಿ.
ಮೋದಿಯವರು ದೇಶದ್ಯಂತ 40ಕೋಟಿ ಮತ ಪಡೆದು ಪ್ರಧಾನಿಯಾಗಿದ್ದಾರೆ.
ಕರ್ನಾಟಕದ ಜನ ನಿನಗೆ 135ಸ್ಥಾನ ನೀಡಿದ್ದಾರೆ ಅದಕ್ಕೆ ನ್ಯಾಯ ಕೊಡುವಂತ ಕೆಲಸ ಮಾಡಿ.
ಗ್ಯಾರಂಟಿ ಯೋಜನೆಗೆ ಹಣದ ಕೃಡೀಕರಣ ಎಲ್ಲಿಂದ ಮಾಡ್ತೀರಾ ಅದರ ಬಗ್ಗೆ ಮಾತನಾಡಿ ಎಂದು ಟೀಕಿಸಿದರು.
2013ರಲ್ಲಿ ನೀವು ಮುಖ್ಯಮಂತ್ರಿಯಾಗಿದ್ದಾಗಲೂ ಮೈಸೂರಿನಲ್ಲಿ ನನ್ನನ್ನ ಆಯ್ಕೆ ಮಾಡಿ ಲೋಕಸಭೆಗೆ ಕಳ್ಸಿದ್ದಾರೆ.2019ರಲ್ಲಿ ನೀವು ಜೆಡಿಎಸ್ ಜೊತೆ ಕೈ ಜೋಡಿಸಿದ್ದಾಗಲು ಜನ ನನ್ನ ಆಯ್ಕೆ ಮಾಡಿದ್ದಾರೆ.
2024 ಚುನಾವಣೆ ಬಗ್ಗೆ ಮುಂದೆ ನೋಡೋಣ.
ಮೋದಿಯವರ ಆಡಳಿತದ ಮೇಲೆ ಜನ ತೀರ್ಮಾನ ಮಾಡ್ತಾರೆ.ಚುನಾವಣೆಯಲ್ಲಿ ಜನರನ್ನ ಮಂಗ್ಯಾ ಮಾಡಿ ಸೀಟು ಗೆಲ್ಲುವುದಷ್ಟೇ ಮುಖ್ಯನ
ನಿರುದ್ಯೋಗಿಗಳಿಗೆ 3ಸಾವಿರ ಕೊಡ್ತೀನಿ ಅಂತ ಹೇಳಿದ್ರಿ.
2,3ವರ್ಷಗಳಿಂದ ಕೆಲಸ ಇಲ್ಲದ ನಿರುದ್ಯೋಗಿಗಳು ನಿಮಗೆ ಮತ ನೀಡಿದ್ದಾರೆ.
ಈಗ ನೋಡಿದ್ರೆ 22-23ರಲ್ಲಿ ಪಾಸ್ ಮಾಡಿದ್ದವರಿಗೆ ಕೊಡ್ತೀನಿ ಅಂದಿದ್ದೀರಿ.
ಮುಂದಿನ ದಿನಗಳಲ್ಲಿ ಅವರೆ ನಿಮ್ಮ ವಿರುದ್ಧ ತಿರುಗಿ ಬೀಳುವ ಕಾಲ ದೂರವಿಲ್ಲ ಎಂದು
ಸಂಸದ ಪ್ರತಾಪ್ ಸಿಂಹ ಹೇಳಿದರು.