ಮೈಸೂರು : ವರುಣ ಜನರೇ ವಿ.ಸೋಮಣ್ಣ ಗೆಲ್ಲಿಸಿ ಅವರನ್ನು ದೊಡ್ಡ ವ್ಯಕ್ತಿ ಮಾಡ್ತೀವಿ ಎಂದು ಅಮಿತ್ ಶಾ ಹೇಳಿದ್ದಾರೆ.
ವರುಣದಲ್ಲಿ ಇಂದು ಬಿಜೆಪಿ ಸಭೆನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಗೆದ್ರೇ PFI ಬ್ಯಾನ್ ರದ್ದು ಮಾಡೋದಾಗಿ ಹೇಳಿದ್ದಾರೆ ಕರ್ನಾಟಕವನ್ನು ಕೇಂದ್ರ ಕಾಂಗ್ರೆಸ್ ಎ.ಟಿ.ಎಂ ಮಾಡಲು ಸಿದ್ದರಾಮಯ್ಯ ಡಿಕೆಶಿ ಹೊರಟಿದ್ದಾರೆ ಎಂದು ಆರೋಪಿಸಿದರು
ಸಿದ್ದರಾಮಯ್ಯ ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಅಂತಾರೆ ದೇಶಕ್ಕೆ ಮೊದಲ ಕೃಷಿ ಬಜೆಟ್ ಕೊಟ್ಟಿದ್ದು ಯಡಿಯೂರಪ್ಪ ಅವರು ಎಂದು ಹಾಡಿ ಹೊಗಳಿದರು.
ಸಿದ್ದರಾಮಯ್ಯ ವಿರುದ್ಧ ಲಿಂಗಾಯತ ಅಸ್ತ್ರ ಪ್ರಯೋಗಿಸಿದ ಅಮಿತ್ ಷಾ ಲಿಂಗಾಯತ ಸಮಾಜಕ್ಕೆ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ. ಈ ಹಿಂದೆಯೂ ನಿಜಲಿಂಗಪ್ಪ ವೀರೇಂದ್ರ ಪಾಟೀಲ್ ಗೆ ಕಾಂಗ್ರೆಸ್ ಅಪಮಾನ ಮಾಡಿದ್ದನ್ನು ಮರೀಬೇಡಿ ಎಂದರು ಜನರಿಗೆ ಹೇಳಿದರು
ಮಂಡ್ಯದಲ್ಲಿ ಮೈ ಶುಗರ್ ಬಂದ್ ಆಗಿತ್ತು, ನಾವು ಅದನ್ನು ಶುರು ಮಾಡಿದೀವಿ, ಮುಸ್ಲಿಂ ಮೀಸಲಾತಿ ತೆಗೆದು ಬೇರೆ ಸಮಾಜಕ್ಕೆ ಕೊಟ್ಟಿದ್ದೇವೆ ಇದು ಸರೀನಾ ತಪ್ಪಾ ನೀವೇ ತೀರ್ಮಾನಿಸಿ ಎಂದರು. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಲಿಂಗಾಯತ ಹಾಗೂ ಎಸ್. ಟಿ ಮೀಸಲಾತಿ ತೆಗೆಯಲು ಮುಂದಾಗುತ್ತಾರೆ ನೆನಪಿಡಿ ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಮೋದಿ ಮಾಡಿಸುತ್ತಿದ್ದಾರೆ, ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ದೇಶದ ಸಮೃದ್ಧಿ ಸಾದ್ಯವಿಲ್ಲ, ಅವರಿಂದ ವರುಣ ಅಭಿವೃದ್ದಿ ಆಗತ್ತಾ ಹೇಳಿ ಎಂದು ನೆರೆದಿದ್ದ ಜನರನ್ನು ಪ್ರಶ್ನೆ ಮಾಡಿದರು.
ಈ ಬಾರಿ ವರುಣ ಜನ ವಿ.ಸೋಮಣ್ಣರನ್ನು ಗೆಲ್ಲಿಸಿ ವರುಣ ಕ್ಷೇತ್ರದ ಅಭಿವೃದ್ದಿ ಆಗತ್ತೆ, ಸೋಮಣ್ಣ ದೊಡ್ಡ ವ್ಯಕ್ತಿಯಾಗಿ ನಿಮ್ಮ ಹತ್ತಿರ ಬರುತ್ತಾರೆ ಎಂದು ಪರೋಕ್ಷವಾಗಿ ಸಿಎಂ ಮಾಡುವ ಸುಳಿವು ನೀಡಿದರು