ಗದಗ : ಕಾಂಗ್ರೆಸ್‌ಗೆ ಮತ ನೀಡಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ. ಕಾಂಗ್ರೆಸ್‌ಗೆ ಮತಹಾಕಿದರೆ ಮುಸ್ಲಿಮರಿಗೆ ಮತ ಹಾಕಿದಂತೆ. ಕಾಂಗ್ರೆಸ್ ಹಿಂದೂ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ಗದಗದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, ಇದು ಹಿಂದೂ ವಿರೋಧಿ ಕಾಂಗ್ರೆಸ್ ಇದೆ. (PFI) ಸಂಘಟನೆಯ ಮೂಲ ಗುರಿ 2047ಕ್ಕೆ ಭಾರತವನ್ನು ಇಸ್ಲಾಂ ಧರ್ಮವನ್ನಾಗಿ ಮಾಡುವುದು. ಪಿಎಫ್‌ಐ ಹಾಗೂ ಕಾಂಗ್ರೆಸ್ ಆಂತರಿಕ ಒಪ್ಪಂದ ಇದೆ. ಆ ದೃಷ್ಟಿಯಿಂದ ಕಾಂಗ್ರೆಸ್‌ನವರು ಬಜರಂಗದಳ ನಿಷೇಧ ಮಾಡುತ್ತೇವೆ ಎಂದಿದ್ದಾರೆ ಎಂದರು.
ಬಜರಂಗದಳ ಯಾವುದೇ ರಾಷ್ಟ್ರ ವಿರೋಧಿ ಚಟುವಟಿಕೆ ಮಾಡುತ್ತಿಲ್ಲ. ಹಿಂದೂ ಧರ್ಮ, ಸಂಸ್ಕೃತಿ ಭಾರತದ ನಾಗರಿಕತೆ ಉಳಿಸುವ ಕೆಲಸ ಮಾಡುತ್ತಿದೆ. ಬಜರಂಗದಳ ನಿಷೇಧ ಮಾಡಲು ಜಗತ್ತಿನ ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ. ಡಿಕೆಶಿಗೆ ಧಮ್ ಇದ್ರೆ ಮೀಸಲಾತಿ ತೆಗೆಯುವುದು, ಬಜರಂಗದಳ ನಿಷೇಧ ಮಾಡಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುವುದಿಲ್ಲ. ಕೇವಲ ಬಜರಂಗದಳ ಅಷ್ಟೇ ಬಾಯ್ ಕಾಟ್ ಅಲ್ಲಾ, ಎಲ್ಲಾ ಹಿಂದೂಗಳು ಬಾಯ್ ಕಾಟ್ ಮಾಡುತ್ತೇವೆ. ಮುಸ್ಲಿಮರ ಮತ ಓಲೈಕೆಗಾಗಿ ಹೀಗೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಕೇವಲ ಮುಸ್ಲಿಂ ಮತಗಳು ಬೇಕಿದೆ, ಹಿಂದೂಗಳ ಮತ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು