ಮೈಸೂರು: ಲಿಂಗಾಯತ ಸಿಎಂಗಳು ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಖಂಡಿಸಿದ್ದಾರೆ.
ಸಿದ್ಧರಾಮಯ್ಯ ಅಸಹನೆಯಿಂದ ಈ ಮಾತು ಹೇಳಿದ್ದಾರೆ.
ಇಡೀ ಲಿಂಗಾಯತ ಸಮುದಾಯವನ್ನು ಭ್ರಷ್ಟಾಚಾರಿಗಳು ಎಂದು ಹೇಳಿರುವುದು ಸರಿಯಲ್ಲ. ಇಡೀ ಕಾಂಗ್ರೆಸ್ ನೀತಿಯೇ ಸಮಾಜವನ್ನುಒಡೆಯುವುದಾಗಿದೆ,ವರುಣದಲ್ಲಿ ಚಕ್ರವ್ಯೂಹದಲ್ಲಿ ಸಿಲುಕಿದ್ದೇನೆಂದಸಿದ್ಧರಾಮಯ್ಯಗೆ ಅನಿಸಿದ್ಧು ಅಸಹನೆಯಿಂದ ಮಾತನಾಡಿದ್ದಾರೆ ಎಂದು ತಿಳಿಸಿದರು.
ಸಿದ್ಧರಾಮಯ್ಯ ಸೋಲಿಸಲು ಡಿಕೆಶಿ ಪ್ರಯತ್ನಿಸುತ್ತಿದ್ದಾರೆ.
ಡಾ. ಜಿ.ಪರಮೇಶ್ವರ್ ಅವರನ್ನು ಸೋಲಿಸಿದ ಶಾಪ ಸಿದ್ಧರಾಮಯ್ಯಗೆ ಶಾಪ ತಟ್ಟಲಿದೆ. ಸಿದ್ಧರಾಮಯ್ಯನವರು ತುಂಬಾ ಹತಾಶರಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಸಿದ್ದರಾಮಯ್ಯ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಡಿ ಕೆ ಶಿವಕುಮಾರ್ ಖರ್ಗೆಯವರನ್ನು ಸಿಎಂ ಮಾಡುವ ವಿಚಾರ ಮುಂದಿಟ್ಟಿದ್ಧಾರೆ.ಹೀಗಾಗಿ ತನಗೆ ದಕ್ಕದ್ಧು ಬೇರೆಯವರಿಗೂ ಧಕ್ಕದಿರಲಿ ಎಂಬ ಕಾರಣಕ್ಕೆ ಸಿದ್ಧರಾಮಯ್ಯ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮೈಸೂರಿನಲ್ಲಿ ಹೇಳಿದರು.