ಶಿವಮೊಗ್ಗ : ವೀರಶೈವ ಲಿಂಗಾಯತರ ಬಗ್ಗೆ ರಾಹುಲ್ ಗಾಂಧಿಗೆ ಏನು ಗೊತ್ತು ಕಾಂಗ್ರೆಸ್ ಮುಳುಗಿದ ಹಡಗು ಸುಮ್ನೆ ಕರ್ಕೊಂಡ್ ಬಂದು ಏನೇನೋ ಸ್ಟೇಟ್ ಮೆಂಟ್ ಕೊಡಿಸುವ ಕೆಲ್ಸ ಮಾಡ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬಿ.ಎಲ್ ಸಂತೋಷ್ ಬಿಜೆಪಿ ಸಂಘಟನೆಗೋಸ್ಕರ ದುಡಿಯುತ್ತಿರುವ ವ್ಯಕ್ತಿ ಅವರ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು. ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯುತ್ತಿದ್ದಾರೆ ಎನ್ನುವುದು ಶುದ್ಧ ಸುಳ್ಳು ಎಂದು ಹೇಳಿದರು. ಅಲ್ಲದೆ ಸಂತೋಷ್ ವಿರುದ್ಧ ಮಾತನಾಡುವವರಿಗೆ ಯೋಗ್ಯತೆ ಇಲ್ಲ, ಕಾಂಗ್ರೆಸ್ ಗೆ ಮೇ 13ರಂದು ಉತ್ತರ ಕೊಡುತ್ತೇವೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಬಗ್ಗೆ ರಾಹುಲ್ ಗಾಂಧಿಗೆ ಏನು ಗೊತ್ತಿದೆ, ಯಾರು ಹೇಳಿದ್ದನ್ನು ಹೇಳಲೇಬೇಕು ಎಂದು ಹೇಳುತ್ತಾರೆ, ಮೋದಿ ಅಮಿತ್ ಶಾ ಮುಂದೆ ರಾಹುಲ್ ಗಾಂಧಿ ಯಾವ ಲೆಕ್ಕ ಎಂದು ವ್ಯಂಗ್ಯವಾಡಿದರು.
ಲಿಂಗಾಯತರ ವಿರುದ್ಧ ಮಾತನಾಡುವ ಸಿದ್ದರಾಮಯ್ಯ, ಈ ಬಾರಿ ಅವರೇ ಗೆಲ್ಲುವುದು ಕಷ್ಟವಾಗಿದೆ, ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಈ ಹಿಂದೆ ಲಿಂಗಾಯತ ಧರ್ಮ ಒಡೆಯಲು ಯತ್ನಿಸಿ ಕೈ ಸುಟ್ಟುಕೊಂಡಿದ್ದರು, ಈ ಬಾರಿಯೂ ಸಿದ್ದರಾಮಯ್ಯ ಪರಿಸ್ಥಿತಿ ಏನಾಗುತ್ತೆ ಕಾದುನೋಡಿ ಎಂದರು