ಮೈಸೂರು: ವರುಣದ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅಬ್ಬರದ ಭಾಷಣ ವಿಚಾರಕ್ಕೆ ಸಂಸದ ವಿ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಗುಡುಗಿದ್ರೆ ಹೆರಿಗೆ ಆಸ್ಪತ್ರೆಲಿ ಹೆರಿಗೆ ಆಗುತ್ತೆ ಅಷ್ಟೇ, ಲೋಕಸಭೆಯಲ್ಲೂ ರಾಹುಲ್ ಗಾಂಧಿ ನಿಲ್ಲಿಸಿಕೊಂಡು ಗುಡುಗಿದ್ರು. ಮೋದಿ ಮುಳುಗಿಹೋದರು ಅನ್ನೋ ಹಾಗೇ ಗುಡುಗಿದ್ರು ಆದ್ರೆ ಕರ್ನಾಟಕದಲ್ಲಿ ಕೇವಲ 1 ಸೀಟು ಗೆದ್ರು ಎಂದು ಕಿಡಿಕಾರಿದರು.
ಗುಡುಗಿ ಗುಡುಗಿ 36 ಸಾವಿರ ಓಟ್ ನಲ್ಲಿ ಸೋತರು
ಬಾದಮಿ ಗೆ ಹೋದ್ರು, ಯಾಕೇ ಬೇಕಿತ್ತು.
ವರುಣದಲ್ಲಿ ಒಂದು ಲಕ್ಷ ಓಟ್ ನಲ್ಲಿ ಗೆಲ್ಲೋಕೆ ಸಾಧ್ಯಾನಾ.
ಪ್ರತಿ ಪಕ್ಷ ನಾಯಕನಾಗಿ ಮಾತನಾಡುವ ಮಾತಾ ಅದು
ಸೋಮಣ್ಣ ಹೊರಗಿನವರು ಅನ್ನೋ ಸಿದ್ದರಾಮಯ್ಯ, ಬಾದಾಮಿಗೆ ಯಾಕೆ ಹೋದರು ಎಂದು ಪ್ರಶ್ನಿಸಿದರು.
ವರುಣ ಕ್ಷೇತ್ರಕ್ಕೆ ಬಂದಿರುವ ಸೋಮಣ್ಣ ಹೊರಗಿನವರು ಎಂದು ಸಿದ್ಧರಾಮಯ್ಯ ಹೇಳುತ್ತಿದ್ದಾರೆ,ಕಳೆದ ಲೋಕಸಭಾ ಚುನಾವಣೆಯಲ್ಲಿ ನನಗೆ ವರುಣ ವಿಧಾನಸಭೆ ಕ್ಷೇತ್ರದಲ್ಲಿ 80 ಸಾವಿರ ಮತಗಳು ಬಂದಿವೆ.ಬಿಜೆಪಿಗೂ ಕಾಂಗ್ರೆಸ್ ನಡುವೆ 8 ಸಾವಿರ ಮತಗಳ ಅಂತರವಿದೆ.ಈಗಲೇ ಏನನ್ನೂ ಹೇಳಲು ಬರಲ್ಲ ಎಂದರು.
ಮುಂದಿನ ದಿನಗಳಲ್ಲಿ ಚಿತ್ರಣ ಸ್ಪಷ್ಟವಾಗುತ್ತಾ ಹೋದಾಗ ಎಲ್ಲಾ ಗೊತ್ತಾಗುತ್ತದೆ.ವರುಣದಲ್ಲಿ ಸದ್ಯದ ಮಟ್ಟಿಗೆ ಬಿಜೆಪಿ ಕಾಂಗ್ರೆಸ್ ಮಧ್ಯೆ ಭಾರೀ ಹಣಾಹಣಿಯೇ ನಡೆಯುತ್ತಿದೆ.
ಅಂತಿಮ ತೀರ್ಮಾನ ಜನರಿಗೆ ಬಿಟ್ಟಿದ್ಧು.ಸಿದ್ಧರಾಮಯ್ಯ ಬಾದಾಮಿಗೆ ಹೋಗಿ ಅಲ್ಲಿ ಗೆಲ್ಲಲಿಲ್ಲವೇ ಎನ್ನುವ ಮೂಲಕ ಬೆಂಗಳೂರಿನಿಂದ ವರುಣಕ್ಕೆ ಬಂದಿರುವ ಸೋಮಣ್ಣ ಗೆಲ್ಲುವ ಸಾಧ್ಯತೆ ಇದೆ ಎಂದು ಪರೋಕ್ಷವಾಗಿ ವಿ ಶ್ರೀನಿವಾಸಪ್ರಸಾದ್ ಹೇಳಿದರು