– ಅವನ್ಯಾವಾನೋ ಸಂತೋಷ್ ಬಿಜೆಪಿ ಹಾಳು ಮಾಡುತ್ತಿದ್ದಾನೆ
– ಲಿಂಗಾಯತ ನಾಯಕರನ್ನು ತುಳಿಯಲು ಆರ್.ಎಸ್.ಎಸ್ ಹುನ್ನಾರ
– ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್ ಹೇಳಿಕೆ
ಮೈಸೂರು : ಲಿಂಗಾಯತ ಪ್ರಬಲ ನಾಯಕ ವಿ.ಸೋಮಣ್ಣ ಹಾಗೂ ಆರ್.ಅಶೋಕ್ ಅವರನ್ನು ಬಲಿ ಕೊಡಲು ಆರ್.ಎಸ್.ಎಸ್ ಹುನ್ನಾರ ನಡೆಸಿದೆ ಎಂದು ವಿಶ್ವನಾಥ್ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವ್ರು, ಬಿಜೆಪಿ ಹಿರಿಯ ನಾಯಕರನ್ನು ತುಳಿಯುವ ಕೆಲ್ಸ ಮಾಡ್ತಿದೆ, ಬಿಜೆಪಿಗೆ ಲಿಂಗಾಯತ ಎಂ.ಎಲ್. ಎ ಬೇಕು ಆದ್ರೆ ನಾಯಕರು ಬೇಡ ಹೀಗಾಗಿ ವರುಣದಲ್ಲಿ ಸೋಮಣ್ಣ ತಂದು ನಿಲ್ಲಿಸಿ ಮುಗಿಸಲು ಸಂಚು ರೂಪಿಸಿದೆ ಎಂದರು
ಕನಕಪುರದಲ್ಲಿ ಡಿಕೆ ಶಿವಕುಮಾರ್ ಎದುರು ಅಶೋಕ್ ಅವರನ್ನು ನಿಲ್ಲಿಸಿದ್ದಾರೆ, ಡಿಕೆ ಪವರ್ಫುಲ್ ನಾಯಕ ಅವರ ವಿರುದ್ಧ ಅಶೋಕ್ ನಿಲ್ಲಿಸಿ ಕುತಂತ್ರ ಮಾಡಿದ್ದಾರೆ ಇಬ್ಬರನ್ನೂ ಸೋಲಿಸಿ ಮೂಲೆಗುಂಪು ಮಾಡೋ ಉದ್ದೇಶವಾಗಿದೆ ಎಂದರು
ಈ ಚುನಾವಣೆಯಲ್ಲಿ ಯಡಿಯೂರಪ್ಪ ಪಾತ್ರ ಏನಿಲ್ಲ, ತಂದಾನಿ ತಾನೋ ಎಂದು ಕುತಿರಬೇಕು ಅಷ್ಟೇ. ಅವನ್ಯವಾನೋ ಸಂತೋಷ್ ಅಂತೆ ಬಿಜೆಪಿ ಹಾಳು ಮಾಡುತ್ತಿದ್ದಾನೆ, ಎಲ್ಲಾ ಗೊತ್ತಿದ್ದರೂ ಸಿಎಂ ಬೊಮ್ಮಾಯಿ ಹೆಂಡತಿ ಜೊತೆ ದೇವಸ್ತಾನ ಸುತ್ತುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು