ಮೈಸೂರು : ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಲಿದೆ, ಹೀಗಾಗಿ ಕಾಂಗ್ರೆಸ್ ನಾಯಕರು ಮುಸ್ಲಿಮರ ಓಲೈಕೆ ಮುಂದುವರಿಸಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಚುನಾವಣೆಯಲ್ಲಿ ಗೆಲ್ಲಲು ಎಸ್ ಡಿ ಪಿ ಐ ಬೆಂಬಲ ಕೇಳಲು ಕಾಂಗ್ರೆಸ್ ಮುಂದಾಗಿದೆ. ಎಸ್ ಡಿ ಪಿ ಐ ನ ಮೂಲ ಸಂಸ್ಥೆಗಳಾದ ಸಿಮಿ ಹಾಗು ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಲಾಗಿದೆ. ಅಂತಹ ಎಸ್ ಡಿ ಪಿ ಐ ಜೊತೆ ಕೈ ಜೋಡಿಸಲು ಕಾಂಗ್ರೆಸ್ ಮುಂದಾಗಿದ್ದು ಶೋಚನೀಯ ಸಂಗತಿ ಎಂದು ತಿಳಿಸಿದರು.
ಕ್ಯಾತಮಾರನಹಳ್ಳಿ ರಾಜು ಹತ್ಯೆ ಹಾಗು ಹುಣಸೂರಿನ ಇಬ್ಬರು ಯುವಕರನ್ನು ಹತ್ಯೆ ಮಾಡಿದ ವಿಚಾರ ಪ್ರಸ್ತಾಪಿಸಿದ ಸಂಸದ ಪ್ರತಾಪ್ ಸಿಂಹ.ಎಸ್ ಡಿ ಪಿ ಐ ವಿರುದ್ಧ ದಾಖಲಾಗಿದ್ಧ ಪ್ರಕರಣಗಳನ್ನು ಸಿದ್ಧರಾಮಯ್ಯ ಸರ್ಕಾರ ವಾಪಸ್ ಪಡೆದುಕೊಂಡಿತು. ಪರಿಣಾಮ ಹಿಂದೂ ಸಂಘಟನೆಗಳ ಮುಖಂಡರು ಹಾಗು ಯುವಕರ ಸರಣಿ ಹತ್ಯೆಯಾಯಿತು ಎಂದರು.
ಎಸ್ ಡಿ ಪಿ ಐ ಹಾಗು ಕೆ ಎಫ್ ಡಿ, ಪಿ ಎಫ್ ಐ ನವರು ಸಿದ್ಧರಾಮಯ್ಯನವರಿಗೆ ದತ್ತು ಪುತ್ರರಾಗಿದ್ಧಾರೆ.
ಕಾಂಗ್ರೆಸ್ ನಾಯಕರು ಎಸ್ ಡಿ ಪಿ ಐ ಬೆಂಬಲ ಕೇಳುವ ಮೂಲಕ ತಾಲಿಬಾನ್ ಸರ್ಕಾರ ತರಲು ಹೊರಟಿದ್ಧಾರೆ.
ಕೆಎಫ್ ಡಿ ಹಾಗು ಎಸ್ ಡಿ ಪಿ ಐ, ಪಿ ಎಫ್ ಐ ನವರು ಸಿದ್ಧರಾಮಯ್ಯನವರ ಸಾಕು ಮಕ್ಕಳು.
ಅಧಿಕಾರಕ್ಕೋಸ್ಕರ ಏನು ಬೇಕಾದರೂ ಮಾಡಲು ಸಿದ್ದವೆಂಬ ಕಾಂಗ್ರೆಸ್ ನಾಯಕರ ನಿಲುವನ್ನು ನಾನು ಖಂಡಿಸುತ್ತೇನೆ ಎಂದರು
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆ ಹೆಚ್ಚಾಗಲಿದೆ.ಕಾಂಗ್ರೆಸ್ ಗೆ ಜನರು ಬೆಂಬಲ ನೀಡಬಾರದು ಎಂದು ಮನವಿ ಮಾಡಿದರು