ರಾಮನಗರ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಕನಕಪುರ ಕ್ಷೇತ್ರಕ್ಕೆ ಆರ್.ಅಶೋಕ್ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಅನುಮಾನ ಶುರುವಾಗಿದೆ.
ಕನಕಪುರದಿಂದ ಡಿಕೆಶಿ ಕಟ್ಟಿ ಹಾಕಲು ಬಿಜೆಪಿ ಆರ್ ಅಶೋಕ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಇತ್ತ ಸಿದ್ದರಾಮಯ್ಯ ವಿರುದ್ದ ವಿ.ಸೋಮಣ್ಣ ಸಮರ ಸಾರಿದ್ದಾರೆ. ಟಿಕೆಟ್ ಕೊಟ್ಟ ಮರುದಿನವೇ ಸೋಮಣ್ಣ ವರುಣ ಹಾಗೂ ಚಾಮರಾಜನಗರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಇತ್ತ ಟಿಕೆಟ್ ಘೋಷಣೆಯಾಗಿ ಐದಾರು ದಿನಗಳ ಕಳೆದರೂ ಆರ್.ಅಶೋಕ್ ಮಾತ್ರ ಕನಕಪುರದ ಕಡೆ ಇನ್ನೂ ತಲೆ ಹಾಕಿಲ್ಲ, ಕನಕಪುರ ಬಿಜೆಪಿ ಕಾರ್ಯಕರ್ತರು ಆರ್.ಅಶೋಕ್ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ. ಡಿಕೆ ಕೋಟೆಗೆ ನುಗ್ಗುಲು ಅಶೋಕ್ ಹಿಂದೇಟು ಹಾಕುತ್ತಿದ್ದಾರಾ ಅಥವಾ ಬೇರೇನೋ ಲೆಕ್ಕಾಚಾರದಲ್ಲಿ ಮಗ್ನರಾಗಿದ್ದಾರ ಎಂದು ಕಾರ್ಯಕರ್ತರು ಗೊಂದಲದಲ್ಲಿದ್ದಾರೆ.