ಚಾಮರಾಜನಗರ : ಬಿಜೆಪಿಯ ಪ್ರಭಾವಿ ಲಿಂಗಾಯತ ಮುಖಂಡ ವಿ.ಸೋಮಣ್ಣ ಅವರು ಚಾಮರಾಜನಗರದಿಂದ ಟಿಕೆಟ್ ಕೇಳಿದ್ದು ಬಹುತೇಕ ಹೈ ಕಮಾಂಡ್ ಒಪ್ಪಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ರೈತ ಮೋರ್ಚಾ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಣ್ಣ ನಾನು 224 ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುತ್ತೇನೆ, ಇಂತದ್ದೇ ಕೊಡಿ ಎಂದು ಕೇಳಿಲ್ಲ, ಗೋವಿಂದರಾಜನಗರ ಹಾಗೂ ಚಾಮರಾಜನಗರ ಟಿಕೆಟ್ ಕೇಳಿರುವುದು ನಿಜ, ಹೈ ಕಮಾಂಡ್ ಎಲ್ಲಿ ಹೇಳಿದರು ನಿಲ್ಲುತ್ತೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಅಲ್ಲದೆ ಅರುಣ್ ಸೋಮಣ್ಣಗೆ ಗುಬ್ಬಿ ಕ್ಷೇತ್ರದ ಟಿಕೆಟ್ ಕೇಳಿದ್ದೆ, ನಾಯಕರು ಏನು ತೀರ್ಮಾನ ಮಾಡ್ತಾರೋ ಗೊತ್ತಿಲ್ಲ ಎಂದು ಹೇಳಿದರು, ಈ ಹಿಂದೆ ವರುಣಾದಿಂದ ಸೋಮಣ್ಣ ಸ್ಪರ್ಧೆ ಮಾಡ್ತಾರೆ ಎಂದು ಹೇಳಲಾಗಿತ್ತು, ವಿಜಯೇಂದ್ರ ಹಾಗೂ ಸೋಮಣ್ಣ ಅವರ ಮುನಿಸು ರಾಜ್ಯದಲ್ಲಿ ಹೊಸ ಸಂಚಲವನ್ನೇ ಸೃಷ್ಠಿ ಮಾಡಿತ್ತು. ನಂತರ ಎಲ್ಲದಕ್ಕೂ ಯಡಿಯೂರಪ್ಪ ತೆರೆ ಎಳೆದಿದ್ದರು.
ಈಗ ಸೋಮಣ್ಣ ಅವರ ಚಾಮರಾಜನಗರ ಬೇಟಿ ಅನೇಕ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಸೋಮಣ್ಣ ಹಿಂದಿನಿಂದಲೂ ಚಾಮರಾಜನಗರ ಟಿಕೆಟ್ ಮೇಲೆ ಕಣ್ಣಿಟ್ಟಿದ್ದು ಈಗ ಪಕ್ಕ ಟಿಕೆಟ್ ಆಗಿದೆ. ಆದ್ದರಿಂದಲೇ ಜಿಲ್ಲೆಗೆ ಬಂದಿದ್ದಾರೆ ಎಂದು ಕಾರ್ಯಕರ್ತರು ಗುಸು ಗುಸು ಚರ್ಚೆ ನಡೆಸಿದ್ದಾರೆ, ಇದಕ್ಕೆ ಪುಷ್ಠಿ ಎಂಬಂತೆ ಮಲೈ ಮಹದೇಶ್ವರ ಬೆಟ್ಟಕ್ಕೆ ಸೋಮಣ್ಣ ಬೇಟಿ ನೀಡಿದ್ದು ಮತ್ತಷ್ಟು ರೆಕ್ಕೆಪುಕ್ಕ ಬಂದಿದೆ.