ಬೆಂಗಳೂರು : ಚುನಾವಣೆ ರಾಜಕೀಯದಿಂದ ಮಾಜಿ ಡಿಸಿಎಂ ಈಶ್ವರಪ್ಪ ನಿವೃತಿ ಘೋಷಿಸಿದ್ದಾರೆ. ಈ ಬಗ್ಗೆ ಹೈ ಕಮಾಂಡ್ ಗೆ ಪತ್ರ ಬರೆದಿರುವ ಈಶ್ವರಪ್ಪ ನನ್ನನ್ನೂ ಯಾವ ಕ್ಷೇತ್ರದಿಂದಲೂ ಪರಿಗಣಿಸದಿರಲು ಮನವಿ ಮಾಡಿದ್ದಾರೆ
ಬಿಜೆಪಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಬೂತ್ ಮಟ್ಟದ ಕಾರ್ಯಕರ್ತನಿಂದ ಹಿಡಿದು ಡಿಸಿಎಂ ವರೆಗೂ ಅಧಿಕಾರ ನಡೆಸಿದ್ದೇನೆ. ನನಗೆ ಬೆಂಬಲ ಕೊಟ್ಟ ಎಲ್ಲರಿಗೂ ನನ್ನ ನಮನಗಳು ಎಂದು ಪತ್ರದಲ್ಲಿ ಬರೆದಿದ್ದಾರೆ
ಬಿಜೆಪಿ ಕಟ್ಟಿದ ನಾಯಕರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಈಗಾಗಲೇ ಚುನಾವಣೆಗೆ ನಿಲ್ಲಲ್ಲ ಎಂದು ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟು ಸಕ್ರಿಯ ರಾಜಕೀಯದಲ್ಲಿದ್ದಾರೆ. ಈಗ ಬಿಜೆಪಿ ಕಟ್ಟಾಳು ಈಶ್ವರಪ್ಪ ಕೂಡ ಚುನಾವಣೆ ರಾಜಕೀಯದಿಂದ ನಿವೃತ್ತಿಯಾಗಿದ್ದು ನಡ್ಡಾ ಅವರಿಗೆ ನಿವೃತ್ತಿ ಪತ್ರ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.